ಹಬ್ಬಗಳ ಆಚರಣೆಯಿಂದ ಸಂಸ್ಕೃತಿ ಉಳಿವು

Kdb_Culture
Published on

ಕಡಬ: ರೋಟರಿ ಕ್ಲಬ್ ಪುತ್ತೂರು, ಎಸ್.ಆರ್.ಕೆ. ಲ್ಯಾಡರ್ಸ್ ಆಶ್ರಯದಲ್ಲಿ ದೀಪಾವಳಿ ಆಚರಣೆ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್ ರಜತ ಸಂಭ್ರಮದ ರಜತ ಮೆಟ್ಟಿಲು ಸ್ಮರಣ ಸಂಚಿಕೆ ಅನಾವರಣ ಸಮಾರಂಭ ಶುಕ್ರವಾರ ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯಿತು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಆಧುನಿಕತೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿರುವ ಕರಾವಳಿ ಜಿಲ್ಲೆ, ಸಾಂಸ್ಕೃತಿಕವಾಗಿಯೂ ಸಂಪದ್ಭರಿತವಾಗಿದೆ. ಆಧುನಿಕತೆಯ ನಡುವಿನಲ್ಲಿ ಸಂಸ್ಕೃತಿ, ಸಂಸ್ಕಾರಗಳು ಒಂದೊಂದಾಗಿ ಮರೆಯಾಗುತ್ತಿರುವ ನಡುವೆ ದೀಪಾವಳಿ ಮೊದಲಾದ ಹಬ್ಬಗಳನ್ನು ಆಚರಿಸುತ್ತಿರುವುದು ಸಂತೋಷದ ವಿಚಾರ. ಇದರ ಮೂಲಕ ಮೂಲಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿ ಆಗುತ್ತದೆ ಎಂದರು.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಮೂಹದ ಆಡಳಿತ ನಿರ್ದೇಶಕ ನ ಬಲರಾಮ್ ಆಚಾರ್ಯ ಮಾತನಾಡಿದರು. ರೋಟರಿ ಕ್ಲಬ್ ಯುವ ಪುತ್ತೂರು ಕಾರ್ಯದರ್ಶಿ ವಚನಾ ಜಯರಾಂ ಉದ್ಘಾಟಿಸಿ ಶುಭಹಾರೈಸಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗಾರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ಕೆ.ಎ., ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ಪತ್ನಿ ಶಿಖಾ ಶರ್ಮಾ ಉಪಸ್ಥಿತರಿದ್ದರು.

ಮೌನೇಶ್ ವಿಶ್ವಕರ್ಮ ಸಂಪಾದಕತ್ವದಲ್ಲಿ ಹೊರತರಲಾದ ರಜತ ಮೆಟ್ಟಿಲು ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ್ ಅಮೈ ಕಲಾಯಿಗುತ್ತು ಪ್ರಾಸ್ತಾವಿಸಿ ಸ್ವಾಗತಿಸಿದರು. ಪುತ್ತೂರು ರೋಟರಿ ಕ್ಲಬ್ ಸರ್ವೀಸ್ ಡೈರೆಕ್ಟರ್ ಪರಮೇಶ್ವರ್ ವಂದಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಲಾಭ ದೃಷ್ಟಿಯಿಂದ ಮಾತ್ರವೇ ಉದ್ಯಮ ನಡೆಸಬಾರದು. ಉದ್ಯಮದ ಜತೆಗೆ ಸಮಾಜಮುಖಿ ಚಿಂತನೆ ಹೊಂದಿದ್ದಾಗ ಎಸ್.ಆರ್.ಕೆ.ಯ ಕೇಶವ ಅಮೈ ಅವರಂತೆ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ. - ಬಲರಾಮ್ ಆಚಾರ್ಯ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ https://www.vijayavani.net/economic-vitality-from-dharamsthala-scheme-2 https://www.vijayavani.net/upazila-kalotsava-in-sheni-from-11

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net