ಧರ್ಮ ಉಳಿ ದರೆ ಸಂಸ್ಕೃತಿ ಉಳಿವು

25-kkr1(10-25
Published on

ಕಿಕ್ಕೇರಿ : ಧರ್ಮದ ಉಳಿವಿಗೆ ಮಹಿಳಾ ಸಬಲೀಕರಣದೊಂದಿಗೆ ಶ್ರಮಿಸಿದರೆ ಸಂಸ್ಕೃತಿ, ಪರಂಪರೆ ಉಳಿಯಲಿದೆ ಎಂದು ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಭೀಮರಾಜ್ ಈರೇಗೌಡ ತಿಳಿಸಿದರು.

ಕಿಕ್ಕೇರಿಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾಪನಹಳ್ಳಿಯ ಗವಿಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆ ಧಾರ್ಮಿಕ, ಶೈಕ್ಷಣಿಕ, ಅರೋಗ್ಯ ಕ್ಷೇತ್ರದಲ್ಲಿ ತನ್ನದೆ ಆದ ಸೇವೆ ಮಾಡುತ್ತಿದೆ ಎಂದು ಪ್ರಶಂಶಿಸಿದರು.

ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಭಗವಂತನನ್ನು ಕಾಣಬೇಕು. ಇಂತಹ ಕೆಲಸ ಸಂಸ್ಥೆ ಮಾಡುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಹಲವು ಯೋಜನೆ ತಂದಿದೆ. ಪರಿಸರ ಉಳಿಸಲು ಕೆರೆ ಉಳಿಸುವ, ಮರಗಿಡ ನೆಡುವ ಯೋಜನೆ ಮಾದರಿಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿಯೂ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಸಂಸ್ಥೆಯ ಕಿಕ್ಕೇರಿ ಯೋಜನಾಧಿಕಾರಿ ಎಂ. ವೀರೇಶಪ್ಪ, ಮೇಲ್ವಿಚಾರಕಿ ಗುಣಶ್ರೀ, ಕುಮಾರ್, ವಿ.ಡಿ.ಹರೀಶ್, ವಿ.ಡಿ.ಮೋಹನ್, ರಾಧಾಹರೀಶ್, ಡಿ.ಸಿ.ನಾರಾಯಣ, ಡಿ.ಎನ್. ಗಿರಿಧರ್, ಶಿವಕುಮಾರ್, ನಾಗೇಶ್, ನವೀನ್, ಸಾವಿತ್ರಮ್ಮ, ಮಹೇಶ್, ಹೂವಿನ ಮಂಜಣ್ಣ, ಸೇವಾ ಪ್ರತಿನಿಧಿಗಳಾದ ಶಶಿಕಲಾ, ನೇತ್ರಾವತಿ, ಸುನಿತಾ, ಪೂರ್ಣಿಮಾ, ಶೋಭಾ, ಪ್ರಗತಿ ಬಂಧು ಸ್ವ ಸಹಾಯ ಮಹಿಳಾ ಸಂಘಗಳ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net