

ಸಿದ್ದಾಪುರ: ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಉಳಿಸುವ ಕಲೆ. ಇದನ್ನು ಉಳಿಸುವಲ್ಲಿ ಮಾತೆಯರ ಕೊಡುಗೆ ಅಪಾರವಾಗಿದೆ.
ಹೊಸ ಹೊಸ ಕಲಾವಿದರು ಅದರಲ್ಲಿಯೂ ಮಹಿಳಾ ಕಲಾವಿದರು ಉದಯಿಸುತ್ತಿರುವುದು ಈ ಕಲೆಯ ಬೆಳವಣಿಗೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜಿ.ಎಲ್.ಹೆಗಡೆ ಕುಮಟಾ ಹೇಳಿದರು.
ತಾಲೂಕಿನ ಕಶಿಗೆಯ ಕೇಶವನಾರಾಯಣ ದೇವಸ್ಥಾನದಲ್ಲಿ ಭುವನೇಶ್ವರಿ ತಾಳಮದ್ದಳೆಕೂಟದವರು ಗಜಾನನ ಭಟ್ಟ ಹೊನ್ನೆಕೈ(ಕಾರವಾರ) ಇವರು ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಸಂಘಟಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಂತರ ಭುವನೇಶ್ಚವರಿ ತಾಳಮದ್ದಳೆ ಕೂಟದವರಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ಟ ತುಳಗೇರಿಮಠ ಹಾಗೂ ಮದ್ದಳೆಯಲ್ಲಿ ಮಂಜುನಾಥ ಹೆಗಡೆ ಕಂಚಿಮನೆ ಸಹಕರಿಸಿದರು.
ಮುಮ್ಮೇಳದಲ್ಲಿ ಜಿ.ಎಲ್.ಹೆಗಡೆ ಕುಮಟಾ- ಹನುಮಂತ, ಜಿ.ಕೆ.ಭಟ್ಟ ಕಶಿಗೆ -ಶತೃಘ್ನ, ಗಣಪತಿ ಗುಂಜಗೋಡ -ವೀರಮಣಿ, ಜೈರಾಮ ಭಟ್ಟ ಗುಂಜಗೋಡ ಮತ್ತು ಎಂ.ಕೆ.ನಾಯ್ಕ ಹೊಸಳ್ಳಿ- ಈಶ್ವರ, ಟಿ.ಎಂ.ರಮೇಶ- ಶ್ರೀರಾಮ, ಪ್ರಸಾದ ಹಲಗೇರಿ -ರುಕ್ಮಾಂಗ, ಗಣಪತಿ ಹೆಗಡೆ ಹೊನ್ನೆಕೈ -ಪುಷ್ಕಳನ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.
ಜಿ.ಕೆ.ಭಟ್ಟ ಕಶಿಗೆ ಪ್ರಾಸ್ತಾವಿಕ ಮತನಾಡಿದರು. ಸೌಭಾಗ್ಯ ಭಟ್ಟ ಸ್ವಾಗತಿಸಿದರು. ಶ್ರೀಧರ ಭಟ್ಟ ಗೋವಾ ವಂದಿಸಿದರು.