ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕು

Culture should be taught along with education.
ಬಾದಾಮಿಯ ರಂಗನಾಥ ನಗರದ ಕಿತ್ತೂರು ಚನ್ನಮ್ಮ ಪ್ರಾಥಮಿಕ ಶಾಲೆಯ 21ನೇ ವಾರ್ಷಿಕ ಸ್ನೇಹ ಸಮ್ಮೆಳನವನ್ನು ಸಂಸ್ಥೆಯ ಅಧ್ಯಕ್ಷ ಡಾ.ಎನ್.ಡಿ ದೊಡ್ಡನಿಂಗಪ್ಪನವರ, ರೇಖಾ ಶಿರೂರು ಉದ್ಘಾಟಿಸಿದರು. ಬಿ.ಟಿ. ಹಳ್ಳಿ, ಎಂ.ಡಿ ಯಲಿಗಾರ, ಡಾ.ಬಸವರಾಜ ಬೆಳವಟಗಿ, ಎಂ.ಕೆ. ಬಡಿಗೇರ, ಎನ್.ಡಿ ದೂಳಪ್ಪನವರ, ಸಿದ್ದು ಗುಡುಗುಡಿ, ಮಳಿಶಾಂತ ಬಿಳೆಬಾಳ, ಹುಲಗಪ್ಪ ಭೋವಿ, ಮಹಾಂತೇಶ ಮಡಿವಾಳರ, ಬಸವರಾಜ ಉಳ್ಳಾಗಡ್ಡಿ ಮತ್ತಿತರರಿದ್ದಾರೆ.
Published on

ಬಾದಾಮಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸಬೇಕಿದೆ ಎಂದು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಬಿ.ಟಿ. ಹಳ್ಳಿ ಹೇಳಿದರು.

ರಂಗನಾಥ ನಗರದ ಕಿತ್ತೂರು ಚನ್ನಮ್ಮ ಪ್ರಾಥಮಿಕ ಶಾಲೆಯ 21ನೇ ವಾರ್ಷಿಕೋತ್ಸವ, ಪ್ರತಿಭಾ ಪರಸ್ಕಾರ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಎನ್.ಡಿ. ದೊಡ್ಡನಿಂಗಪ್ಪನ್ನವರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಕಿತ್ತೂರು ಚನ್ನಮ್ಮನವರ ಹೆಸರಿನಲ್ಲಿ 1994ರಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿಲಾಯಿತು. ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಶಾಲೆಗಳಲ್ಲಿ ಮಕ್ಕಳ ಹೆಚ್ಚಿನ ಜ್ಞಾನಾಭಿವೃದ್ಧಿಗೆ ಈ ವರ್ಷ ಸ್ಮಾರ್ಟ್ ಕ್ಲಾಸ್ ಮೂಲಕ ತರಬೇತಿ ನೀಡುತ್ತಿದ್ದೇವೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೂಡುಬಿದರೆ, ಧಾರವಾಡದ ಶಿಕ್ಷರಿಂದ ತರಬೇತಿ ನೀಡಲಾಗುತ್ತದೆ ಎಂದರು.

ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಎಂ.ಡಿ ಯಲಿಗಾರ ಹಾಗೂ ಡಾ.ಬಸವರಾಜ ಬೆಳವಟಗಿ ಮಾತನಾಡಿದರು.

ಕಿತ್ತೂರು ಚನ್ನಮ್ಮ ಮಹಿಳಾ ಬ್ಯಾಂಕ್ ಅಧ್ಯಕ್ಷೆ ರೇಖಾ ಶಿರೂರ, ಸಿಆರ್‌ಪಿ ಎಂ.ಕೆ. ಬಡಿಗೇರ, ಸಂಸ್ಥೆಯ ನಿರ್ದೇಶಕ ಎನ್.ಡಿ ದೂಳಪ್ಪನವರ, ಸಿದ್ದು ಗುಡುಗುಡಿ, ಮಳಿಶಾಂತ ಬಿಳೆಬಾಳ, ಹುಲಗಪ್ಪ ಭೋವಿ, ಮಹಾಂತೇಶ ಮಡಿವಾಳರ, ಬಸವರಾಜ ಉಳ್ಳಾಗಡ್ಡಿ, ಮುಖ್ಯಾಧ್ಯಾಪಕ ಪ್ರಶಾಂತ ಕುಲಕರ್ಣಿ ಮತ್ತಿತರರಿದ್ದರು. ವೆಂಕಟೇಶ ಕುಲಕರ್ಣಿ ನಿರೂಪಿಸಿದರು, ಬಸವರಾಜ ಉಳ್ಳಾಗಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net