ಶಾಲಾ ವಾರ್ಷಿಕೋತ್ಸವದಲ್ಲಿ ಸಂಸ್ಕೃತಿಗೆ ಒತ್ತು ಸಿಗಲಿ

02,kkr1(3-24
ಕಿಕ್ಕೇರಿಯಲ್ಲಿ ಆಯೋಜಿಸಿದ್ದ ರಾಯಲ್ ಸ್ಕೂಲ್ ವಾರ್ಷಿಕೋತ್ಸವವನ್ನು ಮಲ್ಲಿಕಾರ್ಜುನ ಉದ್ಘಾಟಿಸಿದರು. ರೇವತಿ, ಪುಟ್ಟೇಗೌಡ, ನಾಗರಾಜು, ಮಹೇಶ್, ಕೃಷ್ಣೇಗೌಡ, ರಕ್ಷಿತಾ ಮಹೇಶ್, ರೇವಣ್ಣ, ರಾಣಿ ಇದ್ದರು.
Published on

ಕಿಕ್ಕೇರಿ: ಶಾಲಾ ವಾರ್ಷಿಕೋತ್ಸವದಲ್ಲಿ ಜನಪದ ಮತ್ತು ಸಂಸ್ಕೃತಿಯನ್ನು ಜೋಪಾನ ಮಾಡುವ ಕೆಲಸವಾಗಲಿ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಇತ್ತೀಚೆಗೆ ರಾಯಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ಬೆರಳೆಣಿಕೆಯಷ್ಟು ದೂರವಾಣಿ ಇದ್ದವು. ಪ್ರಸ್ತುತ ಮೊಬೈಲ್ ಇಲ್ಲದ ಮನೆಯಿಲ್ಲ. ಜತೆಗೆ ಮೊಬೈಲ್ ಇಲ್ಲದ ಮನಸ್ಸಿಲ್ಲವಾಗಿದೆ. ಈ ನಡುವೆ ಸಾಂಸ್ಕೃತಿಕ ಚಟುವಟಿಕೆ ಪಾಶ್ಚಾತ್ಯ ಸಂಸ್ಕೃತಿಗೆ ಬಿಂಬಿತವಾಗಿದ್ದು, ಇಂತಹ ಸಂದರ್ಭದಲ್ಲಿ ಜನಪದ, ಸಂಸ್ಕೃತಿ, ಭರತನಾಟ್ಯ, ಸಾಹಿತ್ಯ, ಸಂಗೀತದಂತಹ ಚಟುವಟಿಕೆಗೆ ಒತ್ತು ನೀಡಬೇಕು ಎಂದರು.

ಇನ್‌ಸ್ಪೆಕ್ಟರ್ ರೇವತಿ ಮಾತನಾಡಿ, ಕೋಟಿ ವಿದ್ಯೆಗಿಂತ ಜನಸಾಮಾನ್ಯರಿಗೆ ಸ್ಪಂದಿಸುವ, ನೊಂದವರಿಗೆ ಸಹಕರಿಸುವ ವಿದ್ಯೆ ಮುಖ್ಯ ಎಂದರು.
ಮಕ್ಕಳಿಂದ ಆಕರ್ಷಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಪುಟ್ಟೇಗೌಡ, ಸಿಆರ್‌ಪಿ ನಾಗರಾಜು, ಬಿಐಇಆರ್‌ಟಿ ಮಹೇಶ್, ಕೃಷ್ಣೇಗೌಡ, ರಕ್ಷಿತಾ ಮಹೇಶ್, ರೇವಣ್ಣ, ರಾಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net