

ನಗರದ ಆದರ್ಶ ಶಿಕ್ಷಣ ಸಮಿತಿಯ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ಶ್ರೀ ದೇವರಾಜ್ ಎಂ ಬಾಗಮಾರ ಮೆಮೋರಿಯಲ್ ಸ್ನಾತಕೋತ್ತರ (ಎಂ ಕಾಂ) ವಿಭಾಗಗಳ 2023-24ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಮಾನ್ಯ ಶ್ರೀ ವೀರಯ್ಯಸ್ವಾಮಿ ಹಿರೇಮಠವರು ಜ್ಯೋತಿ ಬೆಳಗಿಸಿ ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಆತ್ಮಬಲ ಮತ್ತು ಆತ್ಮಸ್ಥೈರ್ಯ ಇರಬೇಕು ವಿದ್ಯಾರ್ಥಿಗಳು ಶ್ರಮವಹಿಸಿ ಶ್ರದ್ಧೆಯಿಂದ ಕಲಿತರೆ ಯಾವುದೇ ರೀತಿಯ ಸಾಧನೆ ಮಾಡಬಹುದು ವಿದ್ಯಾರ್ಥಿಗಳಿಗೆ ಗುರಿ ಹೊಂದುವ ಮೂಲಕ ಪ್ರತಿ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಬೇಕು ಅದರೊಂದಿಗೆ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದು ಶಾಲಾ ಕಾಲೇಜುಗಳಲ್ಲಿರುವ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಅವಕಾಶಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಅನೇಕ ನೈಜ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ತದನಂತರ ಮಹಾವಿದ್ಯಾಲಯದಿಂದ ಶ್ರೀಯುತರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆದರ್ಶ ಶಿಕ್ಷಣ ಸಮಿತಿಯ ಚೇರ್ಮನ್ ಸಿಎ ಶ್ರೀ ಆನಂದ್ ಪೋತ್ನಿಸ್ ರವರು ಮಾತನಾಡಿ ನನ್ನಿಂದ ಏನೂ ಆಗುವುದಿಲ್ಲ ಎಂದು ನಕಾರಾತ್ಮಕ ಚಿಂತನೆಗಳನ್ನ ದೂರ ಮಾಡಿ ನಮ್ಮ ನ್ಯೂನ್ಯತೆಗಳನ್ನ ನಾವೇ ಗುರುತಿಸಿಕೊಂಡು ಸರಿ ದಾರಿಗೆ ಹೋಗುವ ವಿದ್ಯಾರ್ಥಿ ಶೈಕ್ಷಣಿಕ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸುತ್ತಾನೆ ಹಾಗೆ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು ನಂಬಿಕೆಯೊಂದಿಗೆ ಪ್ರಯತ್ನ ಪಡುವುದು ಯಾರ ಒತ್ತಡಕ್ಕೆ ಮಣಿಯದೆ ಸ್ವಯಂ ಪ್ರೇರಣೆಯಿಂದ ಓದುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪಾಂಡಿತ್ಯ ಇರುತ್ತದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹಂಚಿಕೊಂಡರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿಯವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಆ ಒಂದು ಪರಂಪರೆಯನ್ನು ತಾವು ಮುಂದುವರೆಸಿಕೊಂಡು ಹೋಗಬೇಕೆಂದು ಅನೇಕ ವಿದ್ಯಾರ್ಥಿಗಳ ಸಾಧನೆಯನ್ನ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಿಖಂಡಿಯವರು ಉಪಸ್ಥಿತರಿದ್ದರು.
ಆಗಮಿಸಿದ ಅತಿಥಿಗಳನ್ನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಸ್ವಾಗತಿಸಿದರು, ಐಕ್ಯೂ ಎಸ್ ಸಿ ಕೋ ಆರ್ಡಿನೇಟರ್ ಉಪ ಪ್ರಾಚಾರ್ಯರು ಡಾ. ವಿ ಟಿ ನಾಯ್ಕರ್ ಅತಿಥಿಗಳ ಪರಿಚಯ ನೆರವೇರಿಸಿ ಕೊಟ್ಟರು ಡಾ. ಸವಿತಾ ಬಂಡಾರ್ಕರ್ ವಂದನಾರ್ಪಣೆ ಮಾಡಿದರು. ರಾಷ್ಟ್ರಮಟ್ಟದ ಯುವ ಉತ್ಸವಕ್ಕೆ ಆಯ್ಕೆಯಾದ ಕಲಾ ವಿಭಾಗದ ವಿದ್ಯಾರ್ಥಿಗಳನ್ನು ಗೌರವಿಸಲಾಗಿತ್ತು ಹಾಗೂ ಬಿ ಕಾಂ ಮತ್ತು ಎಂ ಕಾಂ ಅಂತಿಮ ಪರೀಕ್ಷೆಯಲ್ಲಿ ಪ್ರಶಸ್ತಿ ಸಹಿತ ಪಾಸಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕು. ಕವನ ಕೊಣ್ಣೂರ್ ಪ್ರಾರ್ಥನೆ ಹಾಗೂ ನಿರೂಪಣೆಯನ್ನು ರಂಜಿತ ಹರ್ತಿ, ಪಲಕ್ ಜೈನ್, ಭಾರತೀ ಪವಾರ್ ನಡೆಸಿಕೊಟ್ಟರು.