ಸಂಸ್ಕೃತಿ ಬಿಂಬಿಸುವ ಕುಮಾರವ್ಯಾಸ ಭಾರತ

9 khp 01
ಕಾನಹೊಸಹಳ್ಳಿ ವೈಭವ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅರ್ಕಸಾಲಿ ವೃಷಬೇಂದ್ರಚಾರಿ ಉದ್ಘಾಟಿಸಿದರು. ಸಾಹಿತಿ ಎನ್.ಎಂ.ರವಿಕುಮಾರ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕ ವಸಂತ ಸಜ್ಜನ್, ಯು.ಜಗನ್ನಾಥ ಇತರರಿದ್ದರು.
Published on

ಕಾನಹೊಸಹಳ್ಳಿ: ದೇಶದ ಪ್ರಾಚೀನ ಮಹಾಕಾವ್ಯಗಳಲ್ಲಿ ಕುಮಾರವ್ಯಾಸ ರಚಿಸಿದ ಕುಮಾರವ್ಯಾಸ ಭಾರತ ಅತ್ಯಂತ ಶ್ರೇಷ್ಠ ಕಾವ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಅರ್ಕಸಾಲಿ ವೃಷಭೇಂದ್ರಾಚಾರ್ ಹೇಳಿದರು.

ಗ್ರಾಮದ ವೈಭವ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆದಿಕವಿಗಳು ಕುಮಾರವ್ಯಾಸ ಭಾರತ ಅತ್ಯಂತ ಶ್ರೇಷ್ಠ ಕಾವ್ಯ ಎಂದು ಒಪ್ಪಿಕೊಂಡಿದ್ದಾರೆ. ಕುಮಾರವ್ಯಾಸ ಭಾರತ ಕಾವ್ಯ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅಂಥ ಕಾವ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕಸಾಪ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದಲ್ಲಿ ತಿಂಗಳಿಗೊಮ್ಮೆ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಹಾಗೂ ಸಾಹಿತ್ಯಾಸಕ್ತರನ್ನು ಒಂದುಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸುವಂಥ ಕಾರ್ಯಕ್ರಮಗಳನ್ನು ಮಾಡಬೇಕಿದೆ ಎಂದರು.

ಶಿಕ್ಷಕ ಎಚ್.ಎಂ.ಬಿ.ಗುರುಮೂರ್ತಿ ಮಾತನಾಡಿ, ಕತೆ, ನಾಟಕ, ಬಯಲಾಟಗಳ ಮೂಲಕ ಕುಮಾರವ್ಯಾಸ ಜೀವಂತ ಇದ್ದಾರೆ. ಷಟ್ಪದಿಗಳಲ್ಲಿ ಪದ್ಯಗಳನ್ನು ರಚಿಸಿರುವ ಕುಮಾರವ್ಯಾಸ ಭಾರತದ ಭಕ್ತಿ ಕಾವ್ಯವಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಶಿಕ್ಷಕ ಸಿದ್ಧರಾಮೇಶ್ವರ, ದತ್ತಿ ದಾನಿ ಎಚ್.ಕೆ.ವೆಂಕಟೇಶ್ವರ ರಾವ್, ನಿವೃತ್ತ ಉಪನ್ಯಾಸಕ ಹುಲಿಕೆರೆ ವಸಂತ ಸಜ್ಜನ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಶ್ಯಾಮಸುಂದರ್ ಸಫಾರೆ, ಸಹ ಕಾರ್ಯದರ್ಶಿ ಕೆ.ಸುಭಾಷ ಚಂದ್ರ, ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಒ.ಮಂಜುನಾಥ, ಗೌರವ ಕೋಶಾಧ್ಯಕ್ಷ ಎಸ್.ರಾಮಕೃಷ್ಣ, ಗೌರವ ಕಾರ್ಯದರ್ಶಿ ಎಚ್.ಜಿ.ಪ್ರಕಾಶ್‌ಗೌಡ, ಶರಣ ಶರಣನಗೌಡ, ಶಿಕ್ಷಕ ಕಂಪಳೇಶ, ಮುಖ್ಯಶಿಕ್ಷಕ ಎಚ್.ಮಲ್ಲೇಶ, ಚೌಡಾಪುರ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net