

ಶೃಂಗೇರಿ: ಸಂಸ್ಕೃತ ಪ್ರಾಚೀನ ಮತ್ತು ಭಾರತೀಯ ಶಾಸಿಯ ಭಾಷೆಯಾಗಿದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ. ಆದರೆ ಸಂಸ್ಕೃತ ಭಾಷೆ ಧರ್ಮ ಶಾಸಗಳ ಪಾರಂಪರಿಕ ಭಾಷೆಯಾಗಿದ್ದು ಅದನ್ನು ದೇವಭಾಷೆ ಎಂದು ಕರೆಯಲಾಗುತ್ತದೆ ಎಂದು ಶ್ರೀ ಶಾರದಾ ಪೀಠದ ಶ್ರೀಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠ ಶಾಲೆ ಅಧ್ಯಕ್ಷ ವಿನಾಯಕ ಉಡುಪರು ತಿಳಿಸಿದರು.
ಶೃಂಗೇರಿ ಶ್ರೀಮಠದ ಆವರಣದಲ್ಲಿ ಶನಿವಾರ ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ರಾಜ್ಯ ್ರೌಢಶಾಲಾ ಸಂಸ್ಕೃತಾಧ್ಯಾಪಕ ಸಂಘ ಆಯೋಜಿಸಿದ ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸವಿದೆ. ಮನುಷ್ಯನಿಗೆ ಅತಿಯಾದ ಬುದ್ಧಿಶಕ್ತಿ ಇದೆ. ಆತನ ವ್ಯಕ್ತಿತ್ವ ಪರಿಪೂರ್ಣತೆಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಅಗತ್ಯವಿದೆ. ಸಂಸ್ಕೃತ ಭಾಷೆ ಅಧ್ಯಯನದಿಂದ ಆತನಲ್ಲಿ ಪರಿಜ್ಞಾನ ಪರಿಮೂಡಲು ಸಾಧ್ಯ. ಈ ಭಾಷೆಯಲ್ಲಿ ಧರ್ಮದ ಕುರಿತು ಸಾಕಷ್ಟು ಮಾಹಿತಿಗಳ ಉಲ್ಲೇಖವಿದೆ. ಆಧ್ಯಾತ್ಮಿಕ ಮೌಲ್ಯಗಳ ಸಾರ ಸಂದೇಶಗಳ ಅರಿವು ತಿಳಿಯಬೇಕಾದರೆ ಸಂಸ್ಕೃತ ಭಾಷೆ ಕುರಿತು ಹೆಚ್ಚಿನ ಕಾಳಜಿವಹಿಸಿ ವಿದ್ಯಾರ್ಥಿಗಳು ಪರಿಪೂರ್ಣ ಜ್ಞಾನ ಪಡೆಯಬೇಕು ಎಂದುದರು.
ಸನ್ಮಾನ ಸ್ವೀಕರಿಸಿ ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಅವರ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತಿ ಹಾಗೂ ಸಂಸ್ಕಾರ ನಮ್ಮೊಳಗಿನ ಸಕಾರಾತ್ಮಕ ಚಿಂತನೆಗಳಿಗೆ, ವ್ಯಕ್ತಿತ್ವದ ಪರಿಪೂರ್ಣತೆಗೆ ಸಹಕಾರಿ. ಭಾಷೆ ಉಳಿದ್ದರೆ ಮಾತ್ರ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ. ಎಲ್ಲಿ ಸಂಸ್ಕೃತಿ ಇರುತ್ತದೆಯೋ ಅಲ್ಲಿ ಸುಸಂಸ್ಕೃತ ವಾತಾವರಣ ಕಾಣಲು ಸಾಧ್ಯ. ಸಂಸ್ಕೃತ ಭಾಷೆಯಲ್ಲಿ ಇರುವ ಗ್ರಂಥಗಳು ನಮ್ಮೊಳಗಿನ ಜ್ಞಾನ ಪ್ರಖರತೆ ಹೆಚ್ಚಿಸುತ್ತದೆ. ಈ ಭಾಷೆಗೆ ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ. ಸರ್ಕಾರ ಸಂಸ್ಕೃತ ಭಾಷೆ ಪ್ರಗತಿಗೆ ಸಹಕಾರ ನೀಡಬೇಕು ಎಂದರು.