

ಕೊಳವಿ: ಜಾತ್ರೆ, ಉತ್ಸವದ ಅಂಗವಾಗಿ ನಡೆಯುವ ಮಹಾತ್ಮರ ಆಧ್ಯಾತ್ಮಿಕ ಪ್ರವಚನಗಳು ಸಂಸ್ಕೃತಿ ಬೆಳವಣಿಗೆಗೆ ಸಹಕಾರಿಯಾಗಿವೆ. ಈ ಭಾಗದ ಆರಾಧ್ಯದೈವ ಶ್ರೀ ಕರೆಮ್ಮದೇವಿ ಮಂದಿರ ಜೀರ್ಣೋದ್ಧಾರಗೊಳಿಸಿರುವ ಕಾರ್ಯ ಮಾದರಿಯಾಗಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಹೇಳಿದರು.
ಸಮೀಪದ ಮಮದಾಪುರ(ಕ್ರಾಸ್)ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕರೆಮ್ಮದೇವಿ ದೇವಸ್ಥಾನದ ನೂತನ ಗೋಪುರ ಲೋಕಾರ್ಪಣೆ, ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹರಳಿಕಟ್ಟಿ ನಿಜಗುಣ ಸ್ವಾಮೀಜಿ, ಹುಬ್ಬಳ್ಳಿಯ ಷಡಕ್ಷರಿ ಸ್ವಾಮೀಜಿ, ಸ್ಥಳೀಯ ಚರಮೂರ್ತಿಶ್ವರ ಸ್ವಾಮೀಜಿ, ವೌನ ಮಲ್ಲಿಕಾರ್ಜುನ ಶಿವಯೋಗಿ ಸ್ವಾಮೀಜಿ ಹಾಗೂ ಬಾಲ ಶಿವಯೋಗಿ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಸ್ಥಾನದ ನೂತನ ಗೋಪುರ ಲೋಕಾರ್ಪಣೆ ಹಾಗೂ ಕಳಸಾರೋಣ ನೆರವೇರಿತು.
ಬಳಿಕ ಮಹಾತ್ಮರಿಂದ ಆಧ್ಯಾತ್ಮಿಕ ಪ್ರವಚನ, ಭಕ್ತರಿಂದ ಉರುಳು ಸೇವೆ, ದೇವಿಯ ಗದ್ದುಗೆಗೆ ವಿಶೇಷ ಪೂಜೆ, ಎಲ್ಲ ದೇವರಗಳ ಪಲ್ಲಕ್ಕಿಗಳಿಗೆ ಉಡಿ ತುಂಬುವ ಕಾರ್ಯ ಹಾಗೂ ಅನ್ನ ಸಂತರ್ಪಣೆ ಜರುಗಿತು. ಬುಧವಾರ ವಿವಿಧ ಗ್ರಾಮಗಳ ಪಲ್ಲಕ್ಕಿಗಳಿಗೆ ಬೀಳ್ಕೊಡುವ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡ್ದೆಪ್ಪ ತೋಳಿನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ರಾಮಚಂದ್ರ ಪಾಟೀಲ, ಪರಗೌಡ ಪಾಟೀಲ, ಭೀಮಶಿ ಸುಣಧೋೀಳಿ, ಶಿವಾನಂದ ಪಾಟೀಲ, ಮಾರುತಿ ದ್ಯಾಮನವರ, ಮಂಜುನಾಥ ಸುಣಧೋಳಿ, ಸಿದ್ದಪ್ಪ ಹುಲಿಕಟ್ಟಿ, ಈರಪ್ಪ ಗಂಟೆನ್ನವರ ಇತರರಿದ್ದರು.