ಸಂಸ್ಕಾರಯುತ ಶಿಕ್ಷಣದ ಕೊರತೆ

19 KAMPLI 01 (1)
ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 182ನೇ ಮಹಾಮನೆಯಲ್ಲಿ ಹೊಸಪೇಟೆಯ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಬಾರಕೀರ ಹುಲುಗಪ್ಪ ಮಾತನಾಡಿದರು. ಪ್ರಮುಖರಾದ ಎಚ್.ನಾಗರಾಜ, ಘನಮಠಯ್ಯ ಹಿರೇಮಠ, ಎಸ್.ರಾಮಪ್ಪ ಇದ್ದರು.
Published on

ಕಂಪ್ಲಿ: ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆಯೇ ಹೊರತು ಸಂಸ್ಕಾರ ನೀಡಲಾಗುತ್ತಿಲ್ಲ ಎಂದು ಹೊಸಪೇಟೆ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಬಾರಕೀರ ಹುಲುಗಪ್ಪ ವಿಷಾಧಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅನುಭವ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡ 182ನೇ ಮಹಾಮನೆ ಕಾರ್ಯಕ್ರಮದಲ್ಲಿ ಬಸವ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣದ ಕೊರತೆ ಎದ್ದುಕಾಣುತ್ತಿದೆ. ಬಸವ ತತ್ವ ವಿಚಾರಧಾರೆಗಳು ವೈಜ್ಞಾನಿಕ, ವೈಚಾರಿಕತೆಯಿಂದ ಕೂಡಿದ್ದು ಆಡಳಿತ, ಶಿಕ್ಷಣ, ರಾಜಕೀಯ, ನಿತ್ಯಜೀವನ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅಳವಡಿಕೆ ಅಗತ್ಯ ಎಂದರು.

ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಚ್.ನಾಗರಾಜ ಮಾತನಾಡಿ, ಮಕ್ಕಳು ರ‌್ಯಾಂಕ್‌ಗಳಿಸುವ ಯಂತ್ರಗಳಾಗಿವೆಯೇ ಹೊರತು ನೈತಿಕತೆ, ಪ್ರಾಮಾಣಿಕತೆ, ಜೀವನ ಮೌಲ್ಯಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಬಸವ ವಿಚಾರಧಾರೆ ಭಾಷಣದ ಸರಕಾಗದೆ ಜೀವನದಲ್ಲಿ ಅನುಷ್ಠಾನಗೊಳ್ಳಬೇಕಿದೆ ಎಂದರು.

ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಎಮ್ಮಿಗನೂರಿನ ಅತಿಥಿ ಶಿಕ್ಷಕ ಎಸ್.ರಾಮಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಕೆ.ಚಂದ್ರಶೇಖರ, ಬಿ.ಎಂ.ರುದ್ರಯ್ಯಸ್ವಾಮಿ, ಅಂಬಿಗರ ಮಂಜುನಾಥ, ಚಂದ್ರಯ್ಯಸೊಪ್ಪಿಮಠ, ಬಡಿಗೇರ ಜಿಲಾನ್‌ಸಾಬ್, ಸಜ್ಜೇದ ವೀರಭದ್ರಪ್ಪ, ಬಂಡಾರಿ ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net