

ಮುಳ್ಳೇರಿಯ: ಅಂತಾರಾಜ್ಯ ಮಟ್ಟದ ಚೆಸ್ ಟೂರ್ನಮೆಂಟ್ ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಜರುಗಿತು. ಬದಿಯಡ್ಕದ ಮಾಸ್ಟರ್ ಚೆಸ್ ಅಕಾಡೆಮಿ ಸಂಸ್ಕೃತಿ ಚೆಸ್ ಸ್ಪರ್ಧೆ ಸೀಸನ್ -1ನ್ನು ಆಯೋಜಿಸಿದ್ದು ಜನ ಸಾಗರ ಕುತೂಹಲಭರಿತರಾಗಿ ಭಾಗವಹಿಸಿದ್ದರು.
ಮಾಸ್ಟರ್ ಚೆಸ್ ಅಕಾಡೆಮಿ ಪ್ರಶಾಂತ್ ಮುಳ್ಳಂಕೊಚ್ಚಿ ನೇತೃತ್ವದಲ್ಲಿ ಶಶೀಂದ್ರ ಮವ್ವಾರು ಅವರ ಸಂಘಟನಾ ಸಂಯೋಜನೆಯಂತೆ ಸ್ಪರ್ಧೆ ಜರುಗಿತ್ತು. ಸ್ಪರ್ಧೆಯು ಅಂಡರ್ 9, 12, 15 ಎಂಬೀ ವಿಭಾಗಗಳಲ್ಲಿ ಹಾಗೂ ಓಪನ್ ಕೆಟಗರಿಯಲ್ಲಿಯೂ ನಡೆದಿತ್ತು.ಪಂದ್ಯಾಟವನ್ನು ಹಿರಿಯ ಚೆಸ್ ಆಟಗಾರ ಶ್ರೀರಾಮನ್ ನಂಬೂದಿರಿ ಉದ್ಘಾಟಿಸಿದರು. ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ್, ಉಡುಪಿ ಜಿಲ್ಲಾ ಅಸೋಸಿಯೇಶನ್‌ನ ಉಮಾಕಾಂತ್, ಕರ್ನಾಟಕ ಚೆಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ರಮೇಶ್ ಕೋಟೆ, ರಾಜೇಶ್ ವಿ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಚೆಸ್ ಪ್ರತಿಭೆ ಸಾಕ್ಷತ್ ಉಡುಪಿ ಮುಖ್ಯ ಅರ್ಬಿಟ್ ಆಗಿದ್ದರು. ಚೆಸ್ ತರಬೇತುದಾರ ಕುಂಞಂಬು ಇತರರು ಸಹಕರಿಸಿದ್ದರು.