ಸಂಸ್ಕಾರದಿಂದ ಸಂಸ್ಕೃತಿ ಉಳಿವು ಸಾಧ್ಯ

Culture can survive through rituals.
ರಬಕವಿ-ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನಮುನಿ ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿದರು. ಬೆಟ್ಟದ ಜೈನಮುನಿ ಕುಲರತ್ನಭೂಷಣ ಮಹಾರಾಜರು ಇದ್ದರು.
Published on

ಕಡುಬಡ ಮಕ್ಕಳ ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ಕೊಡುತ್ತೇವೆ. ಶಿಕ್ಷಣ, ಸಂಸ್ಕಾರ ಇದ್ದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂದು ಹುಬ್ಬಳ್ಳಿ ವರೂರನ ಜೈನಮುನಿ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.

ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನಮುನಿ ಕುಲರತ್ನಭೂಷಣ ಮಹಾರಾಜರನ್ನು ಸೋಮವಾರ ಸಂಜೆ ಭೇಟಿ ಮಾಡಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಭದ್ರಗಿರಿ ಬೆಟ್ಟ ಇತಿಹಾಸ ಸೃಷ್ಟಿಸುತ್ತಿದೆ. ಇಲ್ಲಿನ ನಿಸರ್ಗ ರಮಣೀಯವಾಗಿದೆ. ಆಯುರ್ವೇದವನ, ಲಕ್ಷಾಂತರ ಗಿಡಮರಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು ನಮಗೆ ಸಂತಸ ತಂದಿದೆ ಎಂದರು.

ಭದ್ರಗಿರಿ ಬೆಟ್ಟದ ಜೈನಮುನಿ ಕುಲರತ್ನಭೂಷಣ ಮಹಾರಾಜರು ಮಾತನಾಡಿ, ಗುಣಧರನಂದಿ ಮಹಾರಾಜರು ಪ್ರತ್ಯೇಕ ಜೈನ ನಿಗಮವಾಗಬೇಕು ಎಂಬ ಹೋರಾಟದಲ್ಲಿ ರಾಜ್ಯಪಾಲರನ್ನು ಕರೆಯಿಸಿ ಲಕ್ಷಾಂತರ ಜನರನ್ನು ಸೇರಿಸಿ ಅವರಿಗೆ ಮನವರಿಕೆ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net