

ಹರಪನಹಳ್ಳಿ: ರಾಜಕೀಯದ ಜತೆಗೆ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಕೊಂಡು, ಅದರೊಂದಿಗೆ ತಾವೂ ಬೆಳೆದವರು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್. ಅವರು ಇಂದಿನ ಯುವ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಎಂ.ಪಿ.ಪ್ರಕಾಶ್ ಅವರ 10 ನೇ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ತಾಲೂಕು ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
ಕರ್ನಾಟಕ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಎಂ.ಪಿ.ಪಿ. ಪ್ರಮುಖರು. ರಾಜಕಾರಣಿಯಾಗಿದ್ದರೂ ಅವರಲ್ಲೊಬ್ಬ ಕಲಾವಿದ, ರಂಗಕರ್ಮಿ, ಓದುಗ, ಸದಭಿರುಚಿಯ ಪ್ರೇಕ್ಷಕನಿದ್ದ. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದರು.
ಇದೇ ಕಾರಣಕ್ಕಾಗಿ ಅವರು ಎಲ್ಲೇ ಹೋದರೂ ಅವರ ಹಿಂದೆ ಸಾಂಸ್ಕೃತಿಕ, ಸಾಹಿತ್ಯ ವಲಯದ ದಂಡೇ ಇರುತ್ತಿತ್ತು. ಮೌನವೇ ಅವರ ವ್ಯಕ್ತಿತ್ವದ ಮೇರು ಪ್ರಭೆಯಾಗಿತ್ತು ಎಂದು ಹೇಳಿದರು.