ಸಾಂಸ್ಕೃತಿಕ ಲೋಕ ಬಂಡವಾಳಶಾಹಿಗಳ ಕೈ ವಶ: ಗೊಲ್ಲಹಳ್ಳಿ ಶಿವಪ್ರಸಾದ್

mysore
Published on

ಮೈಸೂರು: ಶಾಲಾ-ಕಾಲೇಜುಗಳಲ್ಲಿ ಜಾನಪದ ತರಗತಿಗಳು ನಡೆಸಲು ಆಲೋಚಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.


ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ನಗರದ ಕಿರುರಂಗಮಂದಿರದ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರದ ಸವಾರೋಪ ಕಾರ್ಯಕ್ರಮದಲ್ಲಿ ವಾತನಾಡಿದರು.


ಸಾಂಸ್ಕೃತಿಕ ಲೋಕದ ಎಲ್ಲ ಆಯಾಮಗಳು ಜನರಿಂದ ದೂರವಾಗಿ ಬಂಡವಾಳಶಾಹಿಗಳ ಕೈ ವಶವಾಗುತ್ತಿದೆ. ಆದ್ದರಿಂದ ದೇಶದ ಸಾಂಸ್ಕೃತಿಕ ಮೌಲ್ಯಗಳು ದಾರಿ ತಪ್ಪಿವೆ. ಇದಕ್ಕೆ ಜಾನಪದದಲ್ಲಿ ಮದ್ದು ಇದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಜಾನಪದ ತರಗತಿಗಳು ನಡೆಸಲು ಚಿಂತಿಸಲಾಗುತ್ತಿದೆ ಎಂದರು.


ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸಾಹಿತ್ಯ ಮತ್ತು ಕಲೆ ಪ್ರಮುಖ ಪಾತ್ರ ವಹಿಸಲಿವೆ. ಆದರೀಗ ಅಂತಹ ಸಾಂಸ್ಕೃತಿಕ ಪ್ರಕಾರಗಳು ಸಮಾಜದಿಂದ ದೂರ ಸರಿಯುತ್ತಿವೆ ಎಂಬ ಕಳವಳ ಕಾಡುತ್ತಿದೆ. ಆದರೆ, ಸರ್ಕಾರಕ್ಕೆ, ಅಧಿಕಾರಿಗಳಿಗೆ ಇದರ ಅರಿವು ಇಲ್ಲ. ಸಾಹಿತಿಗಳಿಗೆ, ಕಲಾವಿದರು ತೊಗಲು ಗೊಂಬೆಗಳ ರೀತಿ ವರ್ತಿಸುತ್ತಿದ್ದಾರೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.


ಸಂತರು, ಶರಣರು, ದಾರ್ಶನಿಕರು, ಜಾನಪದರು ವಿಶ್ವವಿದ್ಯಾಲಯಗಳಲ್ಲಿ ಪದವಿ ಗಳಿಸಿದವರಲ್ಲ. ಇವರೆಲ್ಲ ನೀಡಿರುವ ಮೌಲ್ಯಗಳು ಯಾವ ಗ್ರಂಥಗಳಲ್ಲೂ ದಾಖಲಾಗಿಲ್ಲ. ಅವರ ಬದುಕಿನ ನಡೆ ಂಾರನ್ನು ಘಾಸಿ ವಾಡಿಲ್ಲ. ಇನ್ನೊಬ್ಬರಿಗೆ ಹಿಂಸೆ ಕೊಟ್ಟಿಲ್ಲ. ಜಾನಪದರು ಮಹಾನ್ ಸುಸಂಸ್ಕೃತರು ಎಂದು ಹೇಳಿದರು.


ಅನುಕರಣೀಯ ವ್ಯಾಧಿ ಕೂಲಿಯಿಂದ ಅಧಿಕಾರಿಯವರೆಗೂ ವಿಸ್ತಾರಗೊಂಡಿದೆ. ಎಲ್ಲವನ್ನು ಇತರರ ಅನುಕರಣೆ ಮಾಡುವ ವ್ಯಾಧಿಗೆ ಒಳಗಾಗಿ ದೇಶ, ಸಂಸ್ಕೃತಿಗೆ ಕವಲುದಾರಿಯಲ್ಲಿ ಸಾಗಿದೆ. ನಮ್ಮ ಮೂಲ ಸಂಸ್ಕೃತಿಯನ್ನು ಮರೆಮಾಚುವ ಸಾಂಸ್ಕೃತಿಕ ರಾಜಕಾರಣ ವಿಜೃಂಭಿಸುತ್ತಿದೆ ಎಂದು ಕಿಡಿಕಾರಿದರು.


ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ), ಎಪಿಎಂಎಸಿ ವಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ.ಮೈಸೂರು ಗುರುರಾಜು, ಡಾ.ಉಮೇಶ್, ದೇವೆಂದ್ರ ಪ್ರಸಾದ್, ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net