

ಬಂಟ್ವಾಳ: ಲಕ್ಕೇಸಿರಿ ಹಾಗೂ ರಕ್ತೇಶ್ವರೀ ವಿಭಿನ್ನವಾದುದು, ರಕ್ತೇಶ್ವರೀ ದೇವಿಯ ಸ್ವರೂಪ. ಇಲ್ಲಿ ಶಿಲಾ ವಿಗ್ರಹದಲ್ಲಿ ಪೀಠ ಸಹಿತ, ಶಾಸ್ತ್ರೀಯವಾಗಿ ನಿತ್ಯ ಪೂಜೆಯೊಂದಿಗೆ ಶ್ರೀ ರಕ್ತೇಶ್ವರಿಯನ್ನು ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹೇಳಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಕಾರ್ಯದರ್ಶಿ ಎನ್.ಶಿವಶಂಕರ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಸ್ವಾಗತಿಸಿದರು, ಸಹಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಶೆಟ್ಟಿ ಮೊಡಂಕಾಪು ವಂದಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಮನುಷ್ಯ ಜಿಜ್ಞಾಸೆ, ಮನುಷ್ಯ ಆವಿಷ್ಕಾರ ಅನುಭೂತಿ ಪಡೆಯುವ, ಅನ್ವೇಷಣೆ ಮಾಡುವ ಚಾಕಚಕ್ಯತೆ ಇಟ್ಟುಕೊಂಡು ಇತರ ಜೀವಿಗಳಿಗೆ ಭಿನ್ನವಾಗಿದ್ದಾನೆ. ಧರ್ಮ ದೇವರು, ಪ್ರಕೃತಿ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಿದೆ. ಅಧ್ಯಯನ ಮಾಡುತ್ತಲೇ ಅದು ಹೆಚ್ಚು ನಿಗೂಢವಾಗುತ್ತಿದೆ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹಿಂದುಗಳು ಈ ಭೂಮಿಯನ್ನು ತಾಯಿಯೆಂದು ಆರಾಧನೆ ಮಾಡುತ್ತಾರೆ. ಇದು ಹಿಂದೂಗಳಿಗೆ ಮಾತೃಭೂಮಿ, ದೇವಭೂಮಿ, ಕರ್ಮಭೂಮಿಯಾಗಿದೆ. ಭಾರತದ ಉಸಿರು ಧರ್ಮ. ಎಲ್ಲರಿಗೂ ಎಲ್ಲ ಕ್ಷಣವೂ ಒಳಿತು ಮಾಡುವುದು ಧರ್ಮ. ಹಿಂದು ಸಮಾಜ ಉಳಿದರೆ ಭಾರತ ಉಳಿಯುತ್ತದೆ. ಭಾರತ ಉಳಿದರೆ ಜಗತ್ತು ಉಳಿಯುತ್ತದೆ. ಡಾ.ಪ್ರಭಾಕರ ಭಟ್ ಕಲ್ಲಡ್ಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ https://www.vijayavani.net/sri-gopalakrishna-temple-program https://www.vijayavani.net/moodappa-service