ಬದಿಯಡ್ಕ: ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆ ವೀಣಾವಾದಿನಿಯಲ್ಲಿ ಡಿಸೆಂಬರ್ 4ರಿಂದ 8ರ ತನಕ ವೇದ ನಾದ ಯೋಗ ತರಂಗಿಣಿ ಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕೃತಿಕ ಭವನ ಉದ್ಘಾಟನೆ ನಡೆಯಲಿದೆ.
ಬೆಳಗ್ಗೆ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಮೆರವಣಿಗೆ, ಬಳಿಕ ಕವಿಗೋಷ್ಠಿ ನಡೆಯಲಿದೆ. ಡಾ.ರತ್ನಾಕರ ಮಲ್ಲಮೂಲೆ ಉದ್ಘಾಟಿಸುವರು. ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಮತ್ತಿತರರು ಉಪಸ್ಥಿತರಿರುವರು. ಮಧ್ಯಾಹ್ನ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ ಉದ್ಘಾಟಿಸುವರು. ಬಳಿಕ ಕಾರ್ಯಾಗಾರ, ಗಮಕ, ರಾತ್ರಿ ವಾಸ್ತು ರಾಕ್ಷೋಘ್ನ ಹೋಮ ನಡೆಯಲಿದೆ.
6ರಂದು ಬೆಳಗ್ಗೆ ಎಡನೀರು ಮಠಾದೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಪ್ರವೇಶ ಮುಹೂರ್ತ ನಡೆಯಲಿದೆ. ಬಳಿಕ ಭಾವಾಂಬಿಕಾ ಸಂಗೀತ ಕಾರ್ಯಕ್ರಮ, ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ.
7ರಂದು ನವಗ್ರಹ ಪೂಜೆ, ರಾಶಿಕಪ್ರಿಯ, ಯಕ್ಷಗಾನ ತಾಳಮದ್ದಳೆ, ಮುರಳೀವರಮ್, ಗುರುಪೂಜೆ, ಹಿಂದುಸ್ತಾನಿ ಸಂಗೀತ, ಭರತನಾಟ್ಯಂ ನಡೆಯಲಿದೆ. 8ರಂದು ಬೆಳಗ್ಗೆ ಪಂಚರತ್ನ ಕೃತಿಗಳ ಆಲಾಪನೆ, ನಾದೋಪಸಾನ, ಮಧ್ಯಾಹ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಕರ್ಣಾಟಕ ಸಂಗೀತ ಜರುಗಲಿದೆ.