

ಮೈಸೂರು: ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಜ.20 ರಂದು ಸಂಜೆ 6 ಗಂಟೆಗೆ ಶಿವರಾಂಪೇಟೆಯ ರಾಮಮಂದಿರದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿದುಷಿ ಕೊವಿಲಡಿ ಅರ್ಚನಾ ಎಲ್.ರಾವ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀಯ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ವಿದ್ವಾನ್ ಕೇಶವ ಮೋಹನ್‌ಕುಮಾರ್(ಪಿಟೀಲು), ವಿದ್ವಾನ್ ಸಾಯಿಶಿವ ಲಕ್ಷ್ಮೀ ಕೇಶವ (ಮೃದಂಗ) ಸಾಥ್ ನೀಡಲಿದ್ದಾರೆ.