

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಾಸಂಗಮ ಸಂಸ್ಥೆ ಹಾಗೂ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ಸಹಯೋಗದಲ್ಲಿ ಜು. 25, 27ರಂದು ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಾಟಕ, ಜಾನಪದ ನೃತ್ಯ, ಭರತನಾಟ್ಯ, ರಂಗಗೀತೆ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿರ್ಮಾಪಕ ಡಾ. ಕಲ್ಮೇಶ್ ಹಾವೇರಿಪೇಟ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 25ರಂದು ಸಂಜೆ 5.30ಕ್ಕೆ ಕಮಾಂಡೊ ಸೆಕ್ಯೂರಿಟಿ ಸವಿರ್ಸಸ್ ಮುಖ್ಯಸ್ಥ ಎನ್.ಎ. ದೇಸಾಯಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕುಮಾರ ಬೆಕ್ಕೇರಿ, ಡಾ. ಉದಯಕುಮಾರ ದೇಸಾಯಿ, ಅನೀಸ ಬಾರೂದವಾಲೆ, ವಿಶ್ವೇಶ್ವರಿ ಹಿರೇಮಠ, ಮಂಜುನಾಥ ಹಗೇದಾರ, ಕಾಳಪ್ಪ ಬಡಿಗೇರ ಆಗಮಿಸಲಿದ್ದಾರೆ. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್.ಬಿ. ದ್ಯಾಪೂರ ರಂಗಭೂಮಿಯಲ್ಲಿ ಮಹಿಳೆ ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಮಂಥರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜು. 27ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಸದಾನಂದ ಡಂಗನವರ, ಪ್ರಕಾಶ ಉಡಕೇರಿ, ಡಾ. ಇಸಬೆಲ್ಲಾ ಝೇವಿಯರ್, ಡಾ. ಹೆಲನ್ ಮೈಸೂರ, ಬಾಬಾಜಾನ ಮುಲ್ಲಾ, ಶಿವಾನಂದ ಲೋಲೆನವರ ಆಗಮಿಸಲಿದ್ದಾರೆ. ನಂತರ ಸಮರಸಿಂಹ ಸಂಗೊಳ್ಳಿ ರಾಯಣ್ಣ ನಾಟಕ, ಜಾನಪದ ನೃತ್ಯಗಳು, ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರಭು ಹಂಚಿನಾಳ, ವಿಜಯೀಂದ್ರ ಅರ್ಚಕ, ಡಾ. ಅರವಿಂದ ಮುಳಗುಂದ, ವೀರನಗೌಡ ಸಿದ್ದಾಪುರ, ಆನಂದ ಜೋಶಿ, ಇತರರು ಇದ್ದರು.