

ಶನಿವಾರಸಂತೆ: ಸಮೀಪದ ಗುಡುಗಳಲೆ ಜಯದೇವಾ ಜಾನುವಾರುಗಳ ಜಾತ್ರೆಯ ಅಂಗವಾಗಿ ಜಾತ್ರಾ ಸಮಿತಿಯಿಂದ ಜಾತ್ರಾ ವೇದಿಕೆಯಲ್ಲಿ ಪ್ರತಿದಿನ ನಡೆಸುತ್ತಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಶನಿವಾರಸಂತೆ ಶ್ರೀ ಲಲಿತ ನಾಟ್ಯಾಲಯ ಭರತ ನಾಟ್ಯ ಶಾಲಾ ವಿದ್ಯಾರ್ಥಿಗಳಿಂದ ಶನಿವಾರ ರಾತ್ರಿ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
ಅಲ್ಲದೆ ಹಿತ್ತಲಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮಕ್ಕಳು ನೃತ್ಯ, ಸಮೂಹ ನೃತ್ಯ ಇನ್ನು ಮುಂತಾದ ಸಾಂಸ್ಕೃತಿಕ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಜಾತ್ರಾ ಸಮಿತಿ ಪ್ರಮುಖರು, ಶಾಲೆಯ ಶಿಕ್ಷಕರು ಹಾಜರಿದ್ದರು.