ಮುಂಡರಗಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

MDG SAMSKRUTIKA
Published on

ಮುಂಡರಗಿ: ಮಹಿಳೆಯರು ಎಲ್ಲ ರಂಗಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತಹ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಖಜಾಂಚಿ ವಿ.ಜೆ. ಹಿರೇಮಠ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಮಹಿಳಾ ವೇದಿಕೆಯು ಶರನ್ನವರಾತ್ರಿ ಪ್ರಯುಕ್ತ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರ್ಚಕ ಮಲ್ಲಿಕಾರ್ಜುನ ಶಾಸ್ತ್ರಿ ಮಾತನಾಡಿ, ಪುಸ್ತಕ ಓದುವುದರಿಂದಲಷ್ಟೇ ಮಾತ್ರ ಜ್ಞಾನ ಬರುವುದಿಲ್ಲ. ಇತರರು ಹೇಳುವುದನ್ನು ತಾಳ್ಮೆಯಿಂದ ಕೇಳುವುದರಿಂದ ಹಾಗೂ ಉತ್ತಮ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮಗೆ ಜ್ಞಾನ ದೊರೆಯುತ್ತದೆ. ಆದ್ದರಿಂದ ನಾವೆಲ್ಲರೂ ಇತರರು ಹೇಳುವ ಉತ್ತಮ ವಿಚಾರ ಸಂದೇಶಗಳನ್ನು ತಾಳ್ಮೆಯಿಂದ ಕೇಳಿ ತಿಳಿದುಕೊಳ್ಳಬೇಕು ಎಂದರು.

ಪತ್ರಕರ್ತ ಕಾಶೀನಾಥ ಬಿಳಿಮಗ್ಗದ ಮಾತನಾಡಿದರು. ವೀರಭದ್ರೇಶ್ವರ ಮಹಿಳಾ ವೇದಿಕೆಯ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ತನುಶ್ರೀ ಹೊನ್ನಾಪುರ ನೃತ್ಯಗೈದರು. ಅದಿತಿ ಅಕ್ಕೂರ ವಚನ ಹೇಳಿದರು. ಲೀಲಾ ಅಕ್ಕೂರ ಹಾಗೂ ಪುಷ್ಪಾ ಬೆಲ್ಲದ ಪ್ರಾರ್ಥಿಸಿದರು. ವೀರಭದ್ರೇಶ್ವರ ಮಹಿಳಾ ವೇದಿಕೆ ಉಪಾಧ್ಯಕ್ಷೆ ಗೀತಾ ಬಣಗಾರ, ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ, ಜಾತ್ರಾ ಸಮಿತಿ ಅಧ್ಯಕ್ಷ ವೀರೇಶ ಗುಗ್ಗರಿ, ರವೀಂದ್ರಗೌಡ ಪಾಟೀಲ, ಇತರರು ಉಪಸ್ಥಿತರಿದ್ದರು. ಕಲ್ಪನಾ ಕಡ್ಡಿ, ಸಂಗೀತಾ ಕೊರಡಕೇರಿ ಹಾಗೂ ಲತಾ ಕಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net