ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ

31CBP2 (1)
Published on

ಚಿಕ್ಕಬಳ್ಳಾಪುರ: ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ತೋರಬಹುದು ಎಂದು ಶಾಸಕ ಡಾ ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಶ್ರೀ ಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಗಿನ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜ್ಞಾನ ಸಂಪಾದನೆಗೆ ಐಶ್ವರ್ಯ, ತಂದೆ-ತಾಯಿ ಬಳುವಳಿ ಇಲ್ಲವೇ ಯಾವುದೇ ಶಿಾರಸು ಬೇಕಾಗಿಲ್ಲ, ನಿರ್ದಿಷ್ಟ ಗುರಿ ಮತ್ತು ಕಠಿಣ ಶ್ರಮ ಅಗತ್ಯ. ಸಮಾಜದಲ್ಲಿನ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಮಹನೀಯರನ್ನು ಪ್ರೇರಣೆಯನ್ನಾಗಿಸಿಕೊಮಡು ಗೌರವ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ಹಿಂದು ಧರ್ಮವನ್ನು ಪ್ರೀತಿಸುವುದೆಂದರೆ, ಅನ್ಯ ಧರ್ಮಗಳನ್ನು ಹಿಯಾಳಿಸುವುದಲ್ಲ. ಸನಾತನ ಸಂಸ್ಕೃತಿ ಎಲ್ಲರನ್ನೂ ಗೌರವಿಸುವ, ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸುವ ಸಂದೇಶ ಸಾರುತ್ತದೆ. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಒಗ್ಗಟ್ಟಿನಿಂದ ಬದುಕಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಂಸ್ಕೃತಿ, ಶಿಸ್ತು, ಸಂಯಮ, ಮಾನವೀಯ ಮೌಲ್ಯ, ರಾಷ್ಟ್ರಪ್ರೇಮ ಬೆಳೆಸಿ ಸತ್ಪ್ರಜೆಯನ್ನಾಗಿ ರೂಪಿಸಬೇಕು ಎಂದರು.

ಮಾಜಿ ಶಾಸಕ ಎಂ.ಶಿವಾನಂದ, ನಗರಸಭೆ ಮಾಜಿ ಅಧ್ಯಕ್ಷ ಎಂ.ಮುನಿಕೃಷ್ಣ, ಸಮಾಜ ಸೇವಕರಾದ ಸುರೇಂದ್ರಗೌಡ, ಸಂದೀಪ್ ರೆಡ್ಡಿ, ಮುಖಂಡರಾದ ವೇಣುಗೋಪಾಲ್, ಬಿ.ಕೆ.ಮಂಜುನಾಥ್, ಕೆ.ರಾಮು, ಆರ್.ವಿ.ದೇವರಾಜ್, ಚಂದ್ರಶೇಖರ್, ವಸಂತ್, ಪರಮೇಶ್ವರ್, ಗಂಗಾಧರಮೂರ್ತಿ ಇತರರಿದ್ದರು.

ಜಾತಿಯ ಸಂಕೇತವಲ್ಲ: ಪ್ರವಾದಿ ಮಹಮ್ಮದ್ ಪೈಗಂಬರ್‌ರಿಂದ ಇಸ್ಲಾಂ, ಯೇಸುಕ್ರಿಸ್ತನಿಂದ ಕ್ರಿಶ್ಚಿಯನ್ ಧರ್ಮದ ಇತಿಹಾಸ ಪ್ರಾರಂಭವಾಯಿತು, ಆದರೆ, ಹಿಂದು ಧರ್ಮವು ನಾಗರಿಕತೆಯ ಬೆಳವಣಿಗೆಯೊಂದಿಗೆ ಬೆಳೆದು ಬಂದಿದೆ. ನಿರ್ದಿಷ್ಟ ಕಾಲಮಾನ ಹೊಂದಿಲ್ಲ. ಇದು ಒಂದು ಜಾತಿಯ ಸಂಕೇತವೂ ಅಲ್ಲ. ಮನುಷ್ಯನ ಸಮಗ್ರ ನೀತಿ, ಧರ್ಮ, ಮೌಲ್ಯ, ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ ಎಂದು ಶಾಸದ ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net