ಕಲೆ ಅವನತಿಯಿಂದ ನಾಡಿಗೆ ಸಾಂಸ್ಕೃತಿಕ ಬಡತನ

Cultural poverty in the country due to the decline of art
ಮುದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತ ಉತ್ಸವಕ್ಕೆ ಸೋಮನಿಂಗಪ್ಪ ಪೂಜಾರ, ಜಗದೀಶ ಮಹಾಸ್ವಾಮಿಗಳು, ಅಶೋಕ ಪೂಜೇರಿ, ಭಾಗ್ಯಾಗೌಡ ಚಡಚಣ ಚಾಲನೆ ನೀಡಿದರು. ಬಸವರಾಜ ನಾಯಕ, ಶಂಕರ ಭಜಂತ್ರಿ, ಅಜ್ಜಪ್ಪ ಪಡತಾರೆ ಮತ್ತಿತರರಿದ್ದಾರೆ.
Published on

ಲೋಕಾಪುರ: ಪರಂಪರಾಗತವಾಗಿ ಬೆಳದು ಬಂದಿರುವ ಶ್ರೀ ಕೃಷ್ಣ ಪಾರಿಜಾತ ಕಲೆ ಮತ್ತು ಸಂಸ್ಕೃತಿ ಅವನತಿಯಾದರೆ ನಾಡು ಸಾಂಸ್ಕೃತಿಕ ಬಡತನವನ್ನು ಅನುಭವಿಸುವಂತಾಗುತ್ತದೆ ಎಂದು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸೋಮನಿಂಗಪ್ಪ ಪೂಜಾರ ಹೇಳಿದರು.

ಮುದ್ದಾಪುರ ಗ್ರಾಮದಲ್ಲಿ ಶ್ರೀ ಸರಸ್ವತಿ ಮಹಿಳಾ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರನ್ನು ಮತ್ತು ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀ ಕೃಷ್ಣ ಪಾರಿಜಾತ ಕಲಾ ಪ್ರದರ್ಶನ ಆಯೋಜಿಸುವ ಅಗತ್ಯವಿದೆ. ಜಾತ್ರೆ, ಉತ್ಸವಗಳಲ್ಲಿ ಗ್ರಾಮೀಣ ಕಲೆಗಳ ಪ್ರದರ್ಶಿಸುವುದರಿಂದ ಯುವ ಪೀಳಿಗೆಗೆ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ ಎಂದರು.

ಭಾಷಣಗಾರ್ತಿ ಭಾಗ್ಯಾಗೌಡ ಚಡಚಣ ಮಾತನಾಡಿ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ನಮ್ಮತನ ಮರೆಯುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತಿರುವ ಪಾರಿಜಾತ ಕಲಾವಿದರನ್ನು ಮುಖ್ಯವಾಹಿನಿಗೆ ಪರಿಚಯಿಸುತ್ತಿರುವ ಕಾರ್ಯವಾಗುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯದ ಬಯಲಾಟ ಆಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ನಾರಾಯಣ ದುಂಡಪ್ಪ ಪತ್ತಾರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವರ್ಚಗಲ್ ಗ್ರಾಮದ ಜಗದೀಶ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಶೋಕ ಪೂಜೇರಿ, ಬಸವರಾಜ ನಾಯಕ, ಶಂಕರ ಭಜಂತ್ರಿ, ಅಜ್ಜಪ್ಪ ಪಡತಾರೆ, ವಿ.ಆರ್. ತುಬಾಕಿ, ಶಿವು ಸಾಲಹಳ್ಳಿ, ರಂಗನಾಥ ತಳವಾರ, ವಿಠ್ಠಲ ಭಜಂತ್ರಿ, ಶಂಕರ ಮಾಳಿ, ಅಶ್ವಿನಿ ಭಜಂತ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net