ದ.ಕ ಜಿಲ್ಲೆಯ ಶಿಕ್ಷಕರಿಂದ ರಾಜಸ್ಥಾನದಲ್ಲಿ ಸಾಂಸ್ಕೃತಿಕ ಪರಿಚಯ

saams
Published on

ಮಂಗಳೂರು: ಭಾರತ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ರಾಜಸ್ಥಾನದ ಉದಯಪುರದಲ್ಲಿ ಹೆರಿಟೇಜ್ ಆಫ್ ಕ್ರಿಯೇಟಿವ್ ಬೊಂಬೆಯಾಟ ರಿಫ್ರೇಶ್ ಕೋರ್ಸ್ ಐದು ದಿನಗಳ ಅವಧಿಗೆ ದೇಶದಾದ್ಯಂತ 10 ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿತ್ತು.
ಇದರಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 10 ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ಕು ಶಿಕ್ಷಕರು ಆಯ್ಕೆಯಾಗಿದ್ದು, ಕರಾವಳಿಯ ಜಿಲ್ಲೆಯ ಹಿರಿಮೆಯನ್ನು ಸಾರುವ ಯಕ್ಷಗಾನ, ಪಾಡ್ದನ ಮತ್ತು ಹುಲಿವೇಷ ನರ್ತನವನ್ನು ಪ್ರಸ್ತುತಪಡಿಸಿ ಸಂಸ್ಕೃತಿಯ ಪರಿಚಯಿಸಿದರು.
ಕರಾವಳಿಯಿಂದ ನಾಲ್ಕು ಶಿಕ್ಷಕರು ಭಾಗವಹಿಸಿದ್ದು, ಕುಸುಮ ಕೆ ಆರ್, ಸುಕನ್ಯಾ ದೇವಿ, ಶೀಲಾವತಿ .ಎಸ್, ಗೀತಾ ಸೆಲ್ಡಾನ ಕರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net