ಸಾಲಿಗ್ರಾಮದಲ್ಲಿ ಸಾಂಸ್ಕೃತಿಕ ಪರ್ವ ಸಂಭ್ರಮ

mogavira
Published on

ವಿಜಯವಾಣಿ ಸುದ್ದಿಜಾಲ ಕೋಟ

ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಘಟಕದ ಸಾರಥ್ಯದಲ್ಲಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ ಸಾಲಿಗ್ರಾಮ ಜಾತ್ರೆ ಪ್ರಯುಕ್ತ 4ನೇ ದಿನದ ಸಾಂಸ್ಕೃತಿಕ ಪರ್ವ ಸಂಭ್ರಮ ಸಾಲಿಗ್ರಾಮ -2025 ಕಾರ್ಯಕ್ರಮ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಉದ್ಘಾಟಿಸಿದರು. ಪ್ರತಿವರ್ಷವೂ ಜಾತ್ರೆ ಸಂದರ್ಭ ಬ್ರಹ್ಮರಥ ಕಟ್ಟುವ ಮತ್ತು ತಟ್ಟಿರಾಯ ಹೊತ್ತು, ಕುಣಿಯುತ್ತ ಸಾಗುವ ಪಡು-ಕೆಮ್ಮಣ್ಣು ಊರಿನ ಗ್ರಾಮಸಭೆಯ ಐವರನ್ನು ಗೌರವಿಸಲಾಯಿತು.

ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಜಯಂತ ಅಮೀನ್, ಮಾಜಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಶಿವರಾಮ ಕೆ.ಎಂ, ಉಪಾಧ್ಯಕ್ಷ ರವೀಶ್ ಎಸ್. ಕೊರವಡಿ, ಪ್ರಮುಖರಾದ ಕೃಷ್ಣಮೂರ್ತಿ ಮರಕಾಲ, ಚಂದ್ರ ಬಂಗೇರ, ಶ್ರೀನಿವಾಸ ಅಮೀನ್, ಶಾಲಿನಿ ವಿಜಯ ಕಾಂಚನ್ ಉಪಸ್ಥಿತರಿದ್ದರು. ಚಂದ್ರ ಬಂಗೇರ ಸ್ವಾಗತಿಸಿದರು. ಕೃಷ್ಣಮೂರ್ತಿ ಮರಕಾಲ ವಂದಿಸಿದರು. ರಾಜು ಪಾರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿಜೇತ ಶೆಟ್ಟಿ ಸಹಕರಿಸಿದರು. ಮಂಜಿತ್ ಶೆಟ್ಟಿ ತಂಡ ಹಾಗೂ ಪ್ರಜ್ಞಾ ರಾವ್ ಕಟೀಲು ಅವರಿಂದ ನೃತ್ಯ ಗಾನ ವೈವಿಧ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net