

ಮೈಸೂರು: ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಿಂದ ವಾರ್ಷಿಕ ಕಾರ್ಯಕ್ರಮ ‘ಸಾಂಸ್ಕೃತೋತ್ಸವ’ ಆಯೋಜಿಸಲಾಗಿತ್ತು.
ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಲಾವಿದ ಮೈಮ್ ರಮೇಶ್ ಉದ್ಘಾಟಿಸಿ, ವೈದ್ಯಕ್ಷೇತ್ರಕ್ಕೆ ಕಲೆಯ ಅವಕಶ್ಯಕತೆ ಇದೆ. ಕಲೆ ಮೂಲಕ ವೈದ್ಯರೂ ತಮ್ಮ ಮನೋವಿಕಾಸ ಮಾಡಿಕೊಳ್ಳಲು ಅವಕಾಶ ಅಗುತ್ತದೆ ಎಂದರು.
ಜಾದುಕಲಾವಿದೆ ಸುಮಾ ರಾಜ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಂದೆ, ತಾಯಿ, ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ತಮ್ಮ ಬಳಿ ಬರುವ ರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ಚಿಕಿತ್ಸೆ ನೀಡುವ ಮೂಲಕ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಸ್. ರಾಧಾಕೃಷ್ಣ ರಾಮರಾವ್ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ವಿಕಾಸಕ್ಕೆ, ಅವಶ್ಯ ಎಂದು ತಿಳಿಹೇಳಿದರು.
ಸಾಂಸ್ಕೃತಿಕ ಕನ್ನಡ ಸಮಿತಿಯ ಸಲಹೆಗಾರರಾದ ಡಾ.ಎನ್.ನಳಿನಿ, ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಪ್ರಸಾದ್, ಭಾಗ್ಯಶ್ರೀ, ಇತರರು ಇದ್ದದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವೇಷಭೂಷಣ ಕಾರ್ಯಕ್ರಮ ಜರುಗಿತು.