

ಮಡಿಕೇರಿ:
ದಸರಾ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಪ್ರತಿದಿನವೂ ಸಂಜೆ ನಡೆಯುತ್ತಿರುವ ವೈವಿಧ್ಯಮಯ ಕಾರ್ಯಕ್ರಮ ನಗರವಾಸಿಗಳ ಮನಸೂರೆಗೊಳ್ಳುತ್ತಿದೆ. ಮಡಿಕೇರಿಗೆ ಬರುತ್ತಿರುವ ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತಿದೆ. ಕಾಫಿ ದಸರಾ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯೂ ಆಕರ್ಷಕ ಕಾರ್ಯಕ್ರಮಗಳು ನಡೆದವು.
ಗಾನ ನೃತ್ಯ ಅಕಾಡೆಮಿ ಸದಸ್ಯರು ಪ್ರಸ್ತುತಪಡಿಸಿದ ನವದುರ್ಗೆಯರಿಗೆ ನೃತ್ಯದ ಮೂಲಕ ನಮನ ಕಾರ್ಯಕ್ರಮ, ‘ನರ್ತನ ಗಣಪತಿ’ ಹಾಡಿಗೆ ದಿವ್ಯಫಲ್ಗುಣಿ, ಅತಿಥಿ ಪ್ರಸ್ತುತಪಡಿಸಿದ ಕಾರ್ಯಕ್ರಮ ಗಮನ ಸೆಳೆಯಿತು.
ಪ್ರಸಿದ್ಧ ಕಲಾವಿದರಾದ ಮಹೇಂದ್ರ, ದಿವ್ಯ ಹೆಗಡೆ, ಪ್ರಿಯಾ ಕುಂದಾಪುರ,À ಮೆಹಬೂಬ ಸಾಬ್, ರವಿಕುಮಾರ್, ಪ್ರಗತಿ ಬಡಿಗೇರ, ಮಿಂಚು ತಂಡದಿAದ ನಡೆದ ಸಂಗೀತ ಸಂಜೆಗೆ ಪ್ರೇಕ್ಷಕರು ಮನಸೋತರು.
ಮೆಹಬೂಬ ಸಾಬ್ ಅವರ ‘ಪಾರ್ವತಿಯೇ …ಗಿರಿಜೆಯೇ ಕಲ್ಯಾಣಿ’ ಹಾಡನ್ನು ಪ್ರೇಕ್ಷಕರು ತಲ್ಲೀನರಾಗಿ ಆಲಿಸಿದರು. ರವಿಕುಮಾರ್ ಅವರು ಹಾಡಿದ ಜನಪದ ಹಾಡುಗಳು ಎಲ್ಲರನ್ನೂ ಸೆಳೆದವು. ‘ಮಲೆಯ ಮಾದೇವ ಬಾರೋ…’ ಹಾಡು ಭಾರಿ ಚಪ್ಪಾಳೆಗೆ ಕಾರಣವಾಯಿತು.
\ಗಾನನೃತ್ಯ ಅಕಾಡೆಮಿಯಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ಟಿಂ ಪೊನ್ನಿಧ್ವನಿ ತಂಡದಿAದ ಕೊಡಗಿನ ಸಂಸ್ಕೃತಿ ನೃತ್ಯ, ಕಲ್ಲುಗುಂಡಿಯ ನಟರಾಜ ನಾಟ್ಯನಿಕೇತನ ತಂಡದಿAದ ಶ್ರೀದೇವಿ ನೃತ್ಯ, ಮೂರ್ನಾಡಿನ ಸಂಸ್ಕೃತಿ ಸಿರಿ ಟ್ರಸ್ಟ್ನಿಂದ ಯಕ್ಷ ನೃತ್ಯ ಪ್ರದರ್ಶನ ನಡೆಯಿತು.
ಇದಕ್ಕೂ ಮುನ್ನ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಕಾರ್ಯದರ್ಶಿ ಮುನೀರ್ ಅಹಮ್ಮದ್, ‘ಕಾಫಿ ದಸರೆಯ ರೂಪಿಸಿದವರು ಶಾಸಕ ಡಾ.ಮಂತರ್‌ಗೌಡ’ ಎಂದು ಶ್ಲಾಘಿಸಿದರು. ನಂತರ, ಮಂತರ್‌ಗೌಡ ಅವರ ಮುತ್ತಜ್ಜಿ ಡಿ.ಸಾಕಮ್ಮ ಕುರಿತು ವಿವರವಾಗಿ ಮಾತನಾಡಿದರು.
ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಂಗಳವಾರ (ಅ.8) 7 ನೇ ವರ್ಷದ ಮಹಿಳಾ ದಸರಾ ನಡೆಯಲಿದೆ. ಬೆಂಗಳೂರಿನ ಹೇಮಾ ವಿನಾಯಕ್ ಪಾಟೀಲ್ ಅವರಿಂದ ದಾರದಲ್ಲಿ ದುರ್ಗೆಯ ಚಿತ್ರ ರಚನೆ, ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪರ್ಧೆಗಳು, ಮನರಂಜನಾ ಕ್ರೀಡೆಗಳು ನಡೆಯಲಿದೆ.
ಸಂಜೆ 6 ಗಂಟೆಗೆ ಮಹಿಳಾ ತಂಡಗಳಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸರಿಗಮಪ ಖ್ಯಾತಿಯ ಸುರೇಖಾ, ಪ್ರಥ್ವಿ ಭಟ್, ರೇಷ್ಮಾ, ಸ್ನೇಹಾ ನಂಜಪ್ಪ ಮತ್ತು ತಂಡದಿAದ ಸಂಗೀತ ರಸಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.