

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೊತ್ಥಾನ ಶಾಲೆ ಇಡೀ ದೇಶದಲ್ಲಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಶಾಲೆಗಳಲ್ಲಿ ಒಂದು. ಇಂತಹ ಶಾಲೆಗಳಲ್ಲಿ ಕಲಿತ ಮಗು ದೇಶಕ್ಕಾಗಿ ನಾನೇನು ಮಾಡಬೇಕು? ಎಂಬುದರ ಕುರಿತು ಯೋಚಿಸುವಂತ ಶಿಕ್ಷಣ ಸಿಗಲಿದೆ. ಹೀಗಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ರಾಷ್ಟ್ರೊತ್ಥಾನ ಕೊಡುಗೆ ಅಪಾರ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ 2025-26ನೇ ಸಾಲಿನ ಪ್ರವೇಶಾತಿ ಆರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಎಸ್ಎಸ್ನ ಶ್ರೀನಿವಾಸ ನಾಡಗೀರ ಮಾತನಾಡಿ, ರಾಷ್ಟ್ರೊತ್ಥಾನದ ಧ್ಯೇಯ ಹಾಗೂ ಗುರಿಗಳ ಕುರಿತು ಮಾಹಿತಿ ನೀಡಿದರು.
ಶಾಲೆ ಉಪ ಪ್ರಾಚಾರ್ಯ ಕೃಷ್ಣ ಜೋಶಿ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಅನಿತಾ ಜಿ. ಸ್ವಾಗತಿಸಿದರು. ಪ್ರೇಮಾ ಎಸ್. ನಿರೂಪಿಸಿದರು.