ಸೋಲಿಗ ಆದಿವಾಸಿಗಳು ಸಮಾಜದ ಮೂಲಬೇರು : ಸಾಂಸ್ಕೃತಿಕ ವೈವಿಧ್ಯ ಉದ್ಘಾಟಿಸಿ ಎನ್.ಶೀನ ಶೆಟ್ಟಿ ಅನಿಸಿಕೆ

New Project
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸೋಲಿಗ ಆದಿವಾಸಿಗಳು ಸಮಾಜದ ಮೂಲಬೇರು. ಇಲ್ಲಿ ಮನಸ್ಸು ಕಟ್ಟುವ, ಪ್ರೀತಿ ಹಂಚುವ ಕಾರ್ಯಕ್ರಮ ನಡೆದಿದೆ. ಇಂದಿನ ಮಕ್ಕಳಿಗೆ ಆದರ್ಶದ ಕೊರತೆಯಿದ್ದು, ಅದನ್ನು ತುಂಬುವ ಪ್ರಯತ್ನ ಉಪನ್ಯಾಸಕರು ಮಾಡಿದ್ದಾರೆ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್.ಶೀನ ಶೆಟ್ಟಿ ಹೇಳಿದರು.

ವಾಮದಪದವು ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಕರ್ನಾಟಕ-ತಮಿಳುನಾಡು ಗಡಿಭಾಗ, ಚಾಮರಾಜನಗರ, ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣ ಸಿಗುವ ಬುಡಕಟ್ಟು ಆದಿವಾಸಿಗಳಾದ ಸೋಲಿಗರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಪತ್ರಕರ್ತ ಸಂದೀಪ್ ಸಾಲ್ಯಾನ್, ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಪಕ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿ, ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಪಕಿ ಡಾ.ಮೇರಿ ಎಂ.ಜೆೆ. ಉಪಸ್ಥಿತರಿದ್ದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ಸವಿತಾ ಬಿ., ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಚಂದ್ರ ಎಸ್. ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಶ್ರೀಧರ್ ಕೆ. ಸ್ವಾಗತಿಸಿದರು. ಆತಂರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ವಿಶಾಲ್ ಪಿಂಟೋ ವಂದಿಸಿದರು. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸೋಲಿಗರು ರೊಟ್ಟಿ ಹಬ್ಬ, ಗೌಜಲಕ್ಕಿ ನೃತ್ಯ ಮತ್ತಿತರ ಕಾರ್ಯಕ್ರಮಗಳನ್ನು ಇಪ್ಪತ್ತಕಿಂತಲೂ ಹೆಚ್ಚು ಮಂದಿ ಸೋಲಿಗ ಕಲಾವಿದರು ಪ್ರದರ್ಶಿಸಿದರು.

ಆದಿವಾಸಿಗಳ ಹೊಸ ಲೋಕ

ಬಸವರಾಜ್ ನೇತೃತ್ವದ ಸೋಲಿಗರ ತಂಡ ಜನಪದ ಹಾಡು, ನೃತ್ಯ ಪ್ರಕಾರಗಳೊಂದಿಗೆ ಸೋಲಿಗರ ಜೀವನ ವ್ಯವಸ್ಥೆ ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟಿತು. ಆದಿವಾಸಿಗಳು ಈ ನೆಲದ ಮೂಲ ನಿವಾಸಿಗಳು. ಅವರು ತಮ್ಮದೇ ಆದ ಸಂಗೀತ, ನೃತ್ಯ, ಸಂಗೀತ ಪರಿಕರ ಹೊಂದಿದ್ದು, ಹೆಚ್ಚಿನ ಮಹತ್ವ ನೀಡುತ್ತಾರೆ. ಸೋಲಿಗರ ಸಾಂಸ್ಕೃತಿಕ ವೈವಿಧ್ಯತೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಉದ್ದೇಶದಿಂದ ಕಾಲೇಜ್ ಕ್ಯಾಂಪಸ್‌ನಲ್ಲಿ ಆದಿವಾಸಿಗಳ ಹೊಸ ಲೋಕ ತೆರೆದಿಟ್ಟಿತು.

ಸೋಲಿಗರು ಬದುಕುವ ಪರಿಸರ ಚೆನ್ನಾಗಿದ್ದ ಕಾರಣ ಕರೋನಾ ಕಾಯಿಲೆ ಬಂದಿಲ್ಲ. ಆದಿವಾಸಿಗಳ ಜನಪದ ಭಾಷೆ, ಬದುಕು ಬೆಳೆಸುವ ಅಗತ್ಯತೆ ಇದೆ ಬಸವರಾಜ್ ಸೋಲಿಗರ ತಂಡದ ಮುಖ್ಯಸ್ಥ https://www.vijayavani.net/anishs-body-found-washed-ashore-at-suratkal-nitk-beach https://www.vijayavani.net/protest-against-eds-false-charge-sheet-against-congress-leaders

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net