ಬೈಂದೂರು ಉತ್ಸವದಿಂದ ಸಾಂಸ್ಕೃತಿಕ ಅಭಿವೃದ್ಧಿ

sports
ಬೈಂದೂರು ಸಮೃದ್ದ ಜನಸೇವಾ ಟ್ರಸ್ಟ್ ಸಹಭಾಗಿತ್ವದಲ್ಲಿ ಆಯೋಜಿಸಿದ ಬೈಂದೂರು ಉತ್ಸವ -2024ರ ಕ್ರೀಡಾ ಹಬ್ಬಕ್ಕೆ ಉದ್ಯಮಿ ಬಿಜೂರು ರಾಮಕೃಷ್ಣ ಶೇರುಗಾರ್ ಅಧೀಕೃತ ಚಾಲನೆ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಕಲೆ, ಸಾಹಿತ್ಯ, ಸಂಸ್ಕೃತಿ ಸಹಿತ ಬೈಂದೂರಿನ ಸಾಧನೆ ಜಗತ್ತಿನಾದ್ಯಂತ ಪಸರಿಸಿದೆ. ಊರಿನ ಸಾಧನೆ ಸಂಭ್ರಮವಾಗಬೇಕಾದರೆ ಸಂಘಟಿತ ಶ್ರಮ ಅಗತ್ಯ. ಬೈಂದೂರು ಉತ್ಸವದ ಮೂಲಕ ಸಾಂಸ್ಕೃತಿಕ ಅಭಿವೃದ್ದಿ ಕನಸು ನನಸಾಗಬೇಕಿದೆ ಎಂದು ಉದ್ಯಮಿ ಬಿಜೂರು ರಾಮಕೃಷ್ಣ ಶೇರುಗಾರ್ ಹೇಳಿದರು.

ಬೈಂದೂರಿನ ಜೆಎನ್‌ಆರ್ ಕಲಾಮಂದಿರದಲ್ಲಿ ಸಮೃದ್ದ ಜನಸೇವಾ ಟ್ರಸ್ಟ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಬೈಂದೂರು ಉತ್ಸವ -2024ರ ಕ್ರೀಡಾ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಅಸಹಕಾರದ ನಡುವೆಯೂ ಶಾಸಕ ಗುರುರಾಜ್ ಗಂಟಿಹೊಳೆ ದಾನಿಗಳ ನೆರವಿನಿಂದ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಾಯಾಡಿ ಗೋಕುಲ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೌರಿ ದೇವಾಡಿಗ, ತಂಗಪ್ಪನ್, ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀಗಣೇಶ ಉಪ್ಪುಂದ, ಅನಿತಾ ಅರ್.ಕೆ. ಉಪಸ್ಥಿತರಿದ್ದರು. ಸಮೃದ್ದ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ ಪ್ರಸ್ತಾವನೆಗೈದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಕಿಶೋರ್ ಸಸಿಹಿತ್ಲು ವಂದಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net