ಪ್ರೆಸ್‌ಕ್ಲಬ್ ಬೆಳ್ಳಿಹಬ್ಬಕ್ಕೆ ಸಾಂಸ್ಕೃತಿಕ ನೃತ್ಯಗಳ ಕಿರೀಟ

file
Published on

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಸೆ.೧೬ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮೇಳೈಸಲಿದ್ದು, ಬೆಳಿಗ್ಗೆ ೧೦ ಗಂಟೆಯಿಂದ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರಿಗೆ ವಿವಿಧ ಮನರಂಜನಾ ಸ್ಪರ್ಧೆಗಳ ಮೋಜು ಅನಾವರಣಗೊಳ್ಳಲಿದೆ ಎಂದು ಪ್ರೆಸ್ ಕ್ಲಬ್ ಪ್ರದಾನ ಕಾರ್ಯದರ್ಶಿ ಕೆ.ಕೆ.ರೆಜಿತ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಧ್ಯಾಹ್ನ ೧.೩೦ ಗಂಟೆಯಿಂದ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತರಬೇತು ಸಂಸ್ಥೆಗಳ ಮಕ್ಕಳಿಂದ ಮೈನವಿರೇಳಿಸುವ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಮಡಿಕೇರಿ, ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಕುಶಾಲನಗರ, ಕಲಾ ಕಾವ್ಯ ನಾಟ್ಯಶಾಲೆ ಮಡಿಕೇರಿ, ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್ಸ್‌ಟಿಟ್ಯೂಷನ್, ಕುದುಕುಳಿ ಮಿಲನ ಭರತ್ ಸಾರಥ್ಯದ ಭಾಗಮಂಡಲದ ಅಭಿನಯ ಕಲಾ ಮಿಲನಚಾರಿಟೇಬಲ್ ಟ್ರಸ್ಟ್, ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ದಿನೇಶ್ ಸಾರತ್ಯದ ಗುರುಕುಲ ಕಲಾ ಮಂಡಳಿಯ ಸ್ಕೂಲ್ ಆಫ್ ಪರ್ಫಾಮಿರ್ಂಗ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನವಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net