ಸಮಾಜದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಕ್ಷೀಣ

Ranga sougandha News
Published on

ಸಿದ್ದಾಪುರ: ಇತ್ತೀಚಿನ ದಿನದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಕ್ಷೀಣಗೊಳ್ಳುತ್ತಿದೆ. ಇತಿಹಾಸವನ್ನು ಮರೆತು, ಭವಿಷ್ಯ ಕಟ್ಟುವದನ್ನು ಮರೆತಿದ್ದೇವೆ. ಸಾಂಸ್ಕೃತಿಕ ಚೈತನ್ಯವನ್ನು ಉಳಿಸಿಕೊಂಡು ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.

ಪಟ್ಟಣದ ಶಂಕರಮಠದ ಸಭಾಭವನದಲ್ಲಿ ರಂಗಸೌಗಂಧ ತಂಡ 2023-24ರ ರಂಗಸಂಚಾರಕ್ಕಾಗಿ ಸಿದ್ಧಗೊಳಿಸಿದ ಎನ್.ಎಸ್.ರಾವ್ ಮೂಲ ರಚನೆಯ, ಗಣಪತಿಹೆಗಡೆ ಹುಲಿಮನೆ ನಿರ್ದೇಶಿಸಿದ ‘36 ಅಲ್ಲ 63’ ಎನ್ನುವ ಹವಿಗನ್ನಡ ನಾಟಕದ ಮೊದಲ ಪ್ರದರ್ಶನ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.

ಬನವಾಸಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ, ನಮ್ಮ ಮೂಲ ಅಸ್ಮಿತೆಯನ್ನು ಕಾಯ್ದುಕೊಳ್ಳುವಂಥ ಇಂಥ ಪ್ರಯತ್ನಗಳು ಶಾಘ್ಲನೀಯವಾದದ್ದು. ಭಾಷೆ ಸ್ಥಾನಿಕವಾಗಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮ್ಮ ಭಾಷೆಗೆ ಒಂದು ತೀವ್ರತೆ ಇದೆ. ಅದರ ಸಾರವನ್ನು ಪಡೆದುಕೊಳ್ಳುವದು ಮುಖ್ಯ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿದರು.

ರಂಗಸೌಗಂಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಕೊಳಗಿ ಪ್ರಾರ್ಥಿಸಿದರು. ರಾಜಾರಾಮ ಭಟ್ಟ ಹೆಗ್ಗಾರಳ್ಳಿ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net