ಯುವಕರಿಗೆ ಶರಣ- ಶರಣೆಯರ ತತ್ವ ಆದರ್ಶ ತಿಳಿಸಿಕೊಡಿ

9 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿನ ಯುವಕರಿಗೆ ಶರಣ- ಶರಣೆಯರ ಜೀವನ ಪರಿಚಯ, ಅವರ ತತ್ವ ಆದರ್ಶಗಳನ್ನು ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ಶಾಲಾ ದಿನಗಳಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶರಣ ನಡಕಟ್ಟಿ ಗಂಗಪ್ಪ ಭವನದಲ್ಲಿ ಜಾಗೃತ ಮಹಿಳಾ ಸಮಿತಿಯಿಂದ ದಿ. ಶಿವಪ್ರಕಾಶ ಮೆಣಸಿನಕಾಯಿ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಮಾತನಾಡಿ, ಮಕ್ಕಳಿಗೆ ವಿಭೂತಿ, ರುದ್ರಾಕ್ಷಿ, ಪ್ರಸಾದ ಮತ್ತು ವಚನಗಳ ಮಹತ್ವ ತಿಳಿಸಿಕೊಡಬೇಕು ಎಂದರು.

ಮಾಜಿ ಶಾಸಕ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಕ್ರಾತಿವೀರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಜವಾಹರಲಾಲ ನೆಹರು, ಭಗತಸಿಂಗ್, ಒನಕೆ ಓಬವ್ವ, ಜೀಜಾಮಾತಾ, ಸಾವಿತ್ರಿಭಾಯಿ ಫುಲೆ, ಇತರರ ವೇಷಭೂಷಣದಲ್ಲಿ ಗಮನ ಸೆಳೆದರು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಗೌರಮ್ಮ ಮೆಣಸಿನಕಾಯಿ, ಲೀಲಕ್ಕ ಬೆಲ್ಲದ, ಭಾಗ್ಯವತಿ ನಡಕಟ್ಟಿ, ನಳಿನಾಕ್ಷಿ ಅರಳಗುಪ್ಪಿ, ಗಂಗಾ ಬಳಕುಂದಿ, ಸುಶಿಲಾ ಹಿರೇಮಠ, ವೀಣಾ ಹರಿಹರ, ಕುಸುಮಾ ಓತಗೇರಿ, ಭಾರತಿದೇವಿ ರಾಜಗುರು, ಮಾದೇವಿ ಕೆಲಗೇರಿ, ಅನಸೂಯಾ ಜವಳಿ, ಮೀನಾಕ್ಷಿ ಕೋಟೂರ, ಪ್ರಜ್ಞಾ ನಡಕಟ್ಟಿ, ಸುನಂದಾ ಗುಡ್ಡದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net