

ಸುಳ್ಯ: ಇಲ್ಲಿನ ಕೇರ್ಪಳ ಪಯಸ್ವಿನಿ ಯುವಕ ಮಂಡಲ, ಕೇರ್ಪಳ ಶಾಲಾ ಹಳೇ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಸಾಂಸ್ಕೃತಿಕ ಸಂಭ್ರಮ ಕೇರ್ಪಳ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಪುಷ್ಪಾವತಿ ಉದಯ ರಾವ್ ಕೇರ್ಪಳ ಚಾಲನೆ ನೀಡಿದರು. ಕೇರ್ಪಳ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಉಷಾ ಚಂದ್ರಕುವಾರ್ ಅಧ್ಯಕ್ಷತೆ ವಹಿಸಿದ್ದರು. ನ.ಪಂ. ಅಧ್ಯಕ್ಷೆ ಕಿಶೋರಿ ಶೇಟ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ಚೆನ್ನಕೇಶವ ಭಜನಾ ಸಂಘದ ವತಿಯಿಂದ ಭಜನೆ, ಸ್ಥಳೀಯ ಅಂಗನವಾಡಿ, ಕೇರ್ಪಳ ಶಾಲೆ ಹಾಗೂ ಊರವರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಪಯಸ್ವಿನಿ ಗೌರವ: ಬಳಿಕ ಪಯಸ್ವಿನಿ ಗೌರವ ಸವಾರಂಭ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಾಣಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣ ಕೇರ್ಪಳ ಅವರಿಗೆ ಪಯಸ್ವಿನಿ ಗೌರವ ನೀಡಿ ಅಭಿನಂದಿಸಲಾಯಿತು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಗೌರವ ಪ್ರದಾನ ವಾಡಿದರು.
ಸುಳ್ಯದ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಸುಳ್ಯ ನ.ಪಂ. ಸದಸ್ಯರಾದ ವಿನಯ ಕುವಾರ್ ಕಂದಡ್ಕ, ಪೂಜಿತಾ ಕೆ.ಯು, ಸುಧಾಕರ ಕುರುಂಜಿಭಾಗ್, ರಿಯಾಜ್ ಕಟ್ಟೆಕಾರ್, ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಸುಳ್ಯ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ರವೀಶ್ ಪಡ್ಡಂಬೈಲು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯ ಕುವಾರ್ ಕಂದಡ್ಕ, ಮುಖ್ಯ ಶಿಕ್ಷಕಿ ಹೊನ್ನಮ್ಮ, ಯುವಕ ಮಂಡಲದ ಕಾರ್ಯದರ್ಶಿ ಹೇಮಪ್ರಕಾಶ ಕುಂತಿನಡ್ಕ, ಕೋಶಾಧಿಕಾರಿ ಸುಶಾಂತ್ ಕೇರ್ಪಳ ಉಪಸ್ಥಿತರಿದ್ದರು.
ಆರತಿ ಪುರುಷೋತ್ತಮ ಆಶಯ ಗೀತೆ ಹಾಡಿದರು. ದಯಾನಂದ ಪ್ರಸ್ತಾವಿಸಿದರು. ವಿನಯ್, ವಿನ್ಯಾಸ್ ನಿರ್ವಹಿಸಿದರು. ಶಿವಪ್ರಸಾದ್ ವಂದಿಸಿದರು. ಬಳಿಕ ವಿಟ್ಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.