ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿಯ ಅರಿವೂ ಮುಖ್ಯ

UPBR VARSHIKOSTAVA
Published on

ಉಪ್ಪಿನಬೆಟಗೇರಿ: ಜ್ಞಾನ ಸಂಪತ್ತು ಸಂಸ್ಕೃತ ಭಾಷೆಯ ಗ್ರಂಥದಲ್ಲಿದ್ದು, ಇದನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಮಕ್ಕಳಿಗೆ ಪರಿಚಯವಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಮಹದೇವ ಕುಡವಕ್ಕಲಿಗೇರ ಹೇಳಿದರು.

ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ಗುರು ವಿರೂಪಾಕ್ಷೇಶ್ವರ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಸವಾದಿ ಶರಣರ ವಚನಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಬೋಧಿಸಬೇಕು ಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮಾತನಾಡಿ, ಪಾಲಕರು ಮಕ್ಕಳ ವಿದ್ಯಾಭ್ಯಾಸದತ್ತ ಗಮನವಿಡಬೇಕು ಮತ್ತು ಅವರ ಚಲನ ವಲನಗಳನ್ನು ಗಮನಿಸಬೇಕು ಎಂದರು.

ಶಾಲಾ ಕ್ರೀಡಾಕೂಟದ ವಿವಿಧ ಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು. ಘಟಪ್ರಭಾ-ಮುಂಡರಗಿ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಅಮೀನಗಡ ಯರಿಗೋನಾಳ ಪ್ರಭುಶಂಕರೇಶ್ವರ, ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಆಶೀರ್ವಚನ ನೀಡಿದರು.

ಧಾರವಾಡ ಬಿಆರ್​ಪಿ ಬಿಆರ್​ಸಿ ರಾಘವೇಂದ್ರ ಬಡಿಗೇರ, ಗ್ರಾಪಂ ಅಧ್ಯಕ್ಷ ಬಶೀರಅಹ್ಮದ್ ಮಾಳಗಿಮನಿ, ಆರ್.ಜೆ. ಸನ್ನೇದ, ಮಂಜುನಾಥ ಸಂಕಣ್ಣವರ, ಬಸವರಾಜ ಪರಾಂಡೆ, ಬಸಲಿಂಗಪ್ಪ ಮಸೂತಿ, ಕೃಷ್ಣಾ ಬುದ್ನಿ, ರಮೇಶ ಮಡಿವಾಳರ, ವಿಜಯಕುಮಾರ, ಎಸ್.ಕೆ. ಕೊಡಿ, ಎ.ಡಿ. ಅಗ್ನಿಹೋತ್ರಿ, ಕೆ.ಬಿ. ಸಿದ್ದಾಪುರ, ಮಹಾಬಳೇಶ್ವರ ದಂಡಿನ, ಯಲ್ಲಪ್ಪ ಬಾಚಗುಂಡಿ, ಈರಪ್ಪ ಬೂದಿಹಾಳ, ರುದ್ರಪ್ಪ ಅಂಗಡಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net