

ಬೆಳಗಾವಿ: ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಜೋಕಾನಟ್ಟಿ ಸಿದ್ಧಾರೂಢ ಮಹಿಳಾ ಕಲಾ ಸಂಘದ ಆಶ್ರಯದಲ್ಲಿ ಗ್ರಾಮೀಣ ಭಾಗದ ಸಾಂಸ್ಕೃತಿಕ ಕಲಾ ಉತ್ಸವ ಹಾಗೂ ನಾಟಕ ಕಾರ್ಯಕ್ರಮ ಈಚೆಗೆ ಮೂರು ದಿನಗಳ ಕಾಲ ಜರುಗಿತು.
ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಜನಪದ ಕಲೆ ಸರ್ವಕಾಲಕ್ಕೂ ಶ್ರೇಷ್ಠ ಎಂದರು. ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಮಂಜು ಪೂಜೇರಿ, ಜಾನಪದ ಕಲೆ ಉಳಿಸಿ ಬೆಳೆಸಬೇಕೆಂದು ತಿಳಿಸಿದರು.
ಗುರುಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಭಜನೆ, ಡೊಳ್ಳಿನ ಪದಗಳು, ಲಾವಣಿ ಪದಗಳು, ಸೋಬಾನೆ ಪದಗಳು, ಸಂಪ್ರದಾಯ ಪದಗಳು, ನಾಟಕಗಳು, ಜಗ್ಗಲಗಿ, ವೀರಗಾಸೆ, ಸಣ್ಣಾಟಗಳು ಜರುಗಿದವು.
ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ರುದ್ರಪ್ಪ ಮಾದರ, ಯಮನವ್ವ ಮಾದರ, ಅಕ್ಕಮಹಾದೇವಿ ಮಾದರ, ಸಂತೋಷ ಅವಜಪ್ಪಗೋಳ, ಬಸವರಾಜ ಹರಿಜನ, ಶ್ರೀಶೈಲ ಹಡಪದ, ಶಿವಗೊಂಡ ಪಾಟೀಲ, ಭೀಮಪ್ಪ ಖೋದನಾಪುರ, ಸಂಗಮೇಶ ಪೂಜೇರಿ, ಶಿವಾನಂದ ಕುದರೆ ಇತರರಿದ್ದರು.