ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸಮಾರೋಪ

Sports Logo
Published on

ಹೊಳೆಆಲೂರ: ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ 2024- 25ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಸಮಾರೋಪ ಸಮಾರಂಭ ಏ. 7ರಂದು ಬೆಳಗ್ಗೆ 10.30ಗಂಟೆಗೆ ಜರುಗಲಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಪ್ರಾಚಾರ್ಯ ವಿನೋದಕುಮಾರ ಸೋನಾರ ಅಧ್ಯಕ್ಷತೆ ವಹಿಸುವರು. ಪಿಡಿಒ ಬಸವರಾಜ ಗಿರಿತಮ್ಮನ್ನವರ, ಮೆಣಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎಲ್. ದಾಸರ, ಅಸೂಟಿ ಫಲಹಾರೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಸವದಿ, ಬೆನಹಾಳ ಪ್ರೌಢಶಾಲೆ ಎಂ.ಆರ್. ಗೌಡರ, ಹೊಳೆಮಣ್ಣೂರ ಪ್ರೌಢಶಾಲೆಯ ಡಿ.ಬಿ. ಬಿರಾದಾರ, ಕಲ್ಮೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಸಂಕನಗೌಡ್ರ, ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಚಾರ್ಯ ಬಿ.ಎನ್. ಅಂಗಡಿ, ಸಿಂಚನ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರಯ್ಯವಸ್ತ್ರದ, ಶಿಕ್ಷಣ ಇಲಾಖೆ ಸಲಹೆಗಾರ ರಾಜಕುಮಾರ ಎಚ್., ಉಪನ್ಯಾಸಕ ಜಿಲಾನಿ ಅಹ್ಮದ್ ಪಟೇಲ, ಬ್ರಹ್ಮಾನಂದ ಕಿತ್ತಲಿ ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net