ಉತ್ತಮ ಭವಿಷ್ಯಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯ

Inauguration Ceremony
ಬಾಗಲಕೋಟೆ ನಗರದ ಬಿವಿವಿ ಸಂಘದ ಹೊಸ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯ 2023-23 ನೇ ಸಾಲೀನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಉದ್ಘಾಟಿಸಿದರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ. ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿವಿವಿ ಸಂಘದ ಬಿ.ಎಚ್.ಆರ್.ಡಿ. ನಿರ್ದೇಶಕ ಎಸ್.ಆರ್. ಮನಹಳ್ಳಿ, ಬಾಲಕಿಯರ ಪ್ರೌಡಶಾಲೆಯ ಪ್ರಾಚಾರ್ಯ ಡಾ. ಪಿ.ಎಸ್. ಆಲೂರ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಗಳು ಅವಶ್ಯ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.

ನಗರದ ಬಿವಿವಿ ಸಂಘದ ಹೊಸ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯ 2023-23 ನೇ ಸಾಲೀನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಓದು, ಅಂಕ ಗಳಿಸುವುದಷ್ಟೇ ಅಲ್ಲ, ಅದಕ್ಕೂ ಮೀರಿದ್ದು ಬದುಕು. ಬದುಕಿಗೆ ಉದ್ಯೋಗ ಬೇಕು. ಬದುಕು ಅಂದರೆ ಉದ್ಯೋಗವಲ್ಲ. ನಾವೂ ಸಶಕ್ತ ಪ್ರಜೆಗಳಾಗಬೇಕು. ಪರಿಸ್ಥಿತಿಗಳನ್ನು ಎದುರಿಸಿ ನಿಲ್ಲಬೇಕು. ಅಂದಾಗ ನಮಗೆ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣದ ಅರಿವಾಗುತ್ತದೆ ಎಂದರು.
ನಾವು ಕಾಣುವ ಕನಸುಗಳನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ನಮ್ಮೊಳಗಿನ ಶಕ್ತಿ ಜಾಗೃತಗೊಳಿಸಲು ಪಠ್ಯದ ಜೊತೆಗೆ ಕ್ರೀಡಾ ಸಾಂಸ್ಕೃತಿಕ ಚಟುವಟಿಗಳು ಅಗತ್ಯವಾಗಿವೆ ಎಂದು ಹೇಳಿದರು.


ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳಲು ಸಹಾಯವಾಗುತ್ತದೆ. ಇಂತಹ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ನಮ್ಮನ್ನು ನಾವು ನವೀಕರಿಸಿಕೊಳ್ಳುತ್ತಾ ಸಾಗಬೇಕಿದೆ ಎಂದರು.

ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿವಿವಿ ಸಂಘದ ಬಿ.ಎಚ್.ಆರ್.ಡಿ. ನಿರ್ದೇಶಕ ಎಸ್.ಆರ್. ಮನಹಳ್ಳಿ, ಬಾಲಕಿಯರ ಪ್ರೌಡಶಾಲೆಯ ಪ್ರಾಚಾರ್ಯ ಡಾ. ಪಿ.ಎಸ್. ಆಲೂರ, ಡಿ.ವಿ. ಶಿಕ್ಕೇರಿ, ಚೆನ್ನಮ್ಮ ಏಳಮ್ಮಿ ಇದ್ದರು. ಎಂ.ಆರ್. ಮನಹಳ್ಳಿ ಸ್ವಾಗತಿಸಿದರು. ಪ್ರತಿಭಾ ಯತ್ನಟ್ಟಿ ಪ್ರಾರ್ಥಿಸಿದರು. ಟಿ.ಎಸ್. ನರೆಗಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net