

ಸಿದ್ದಾಪುರ: ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮಾತ್ರ ಸಂಸ್ಕೃತಿ ಬೆಳವಣಿಗೆ ಸಾಧ್ಯ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಅಮ್ಮತಿ ಸಮೀಪದ ಪುಲಿಯೇರಿ ಗ್ರಾಮದಲ್ಲಿರುವ ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಭಕ್ತಿ ಪೂರಕವಾಗಿ ಪ್ರಾರ್ಥನೆ ಮಾಡಿದರೆ ಉತ್ತಮ ಮಳೆ-ಬೆಳೆಯೊಂದಿಗೆ ಶಾಂತಿ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯವಾಗಲಿದೆ. ಧಾರ್ಮಿಕ ಆಚರಣೆಗಳ ಮೂಲಕ ಎಲ್ಲರೂ ಒಗ್ಗೂಡಿ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿದರು. ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಎಂ.ಟಿ.ಶಶಿ, ಕಾರ್ಯದರ್ಶಿ ಎ.ವಿ.ಶೀಲಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಶಾಂತ್, ಸಮಿತಿಯ ಪ್ರಮುಖರಾದ ಪ್ರದೀಪ್, ಸಿಜಿಲ್, ಮನು, ಅಭಿಜಿತ್, ಶಶಿಧರನ್, ಚಂದ್ರನ್, ರದೀಶ್, ರಾಜೇಶ್, ನಿತಿನ್, ರಿಜೇಶ್, ಸುರೇಶ್, ಕಲೇಶ್,ಆಕಾಶ್, ರಾಮಕೃಷ್ಣ ಮತ್ತಿತರರು ಇದ್ದರು.