ಕಡಿಮೆ ಖರ್ಚಿನಲ್ಲಿ ಸಿರಿಧಾನ್ಯ ಬೇಸಾಯ

30 upbr 2-Siri Danya tarabeti
Published on

ಉಪ್ಪಿನಬೆಟಗೇರಿ: ರೈತರು ಕೃಷಿ ಭೂಮಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬೀಜಗಳನ್ನು ಬಿತ್ತಿ, ಕಡಿಮೆ ಖರ್ಚಿನಲ್ಲಿ ಸಿರಿಧಾನ್ಯಗಳ ಬೇಸಾಯ ಮಾಡಬಹುದು ಎಂದು ಧಾರವಾಡ ಕೃಷಿ ವಿಜ್ಞಾನ ಕೇಂದ್ರದ ಸಿರಿಧಾನ್ಯ ತಜ್ಞ ಡಾ.ನಾಗಪ್ಪ ಗೋವನಕೊಪ್ಪ ಹೇಳಿದರು.

ಸಮೀಪದ ಹಾರೋಬೆಳವಡಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಸಿರಿಧಾನ್ಯ ಬೇಸಾಯ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಬಿತ್ತನೆ ಬೀಜದ ಆಯ್ಕೆ, ರೋಗ ತಗಲುವಿಕೆ ಹಾಗೂ ಕೀಟಗಳ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಮಾರುಕಟ್ಟೆ ಮೇಲ್ವಿಚಾರಕ ಮಂಜುನಾಥ ಮಾತನಾಡಿ, ಸಿರಿಧಾನ್ಯಗಳಿಂದ ಮಾನವನ ಶರೀರದ ಆರೋಗ್ಯಕ್ಕೆ ದೊರೆಯುವ ಪೋಷಕಾಂಶಗಳು ಮತ್ತು ಪ್ರಯೋಜನಗಳು, ಅವುಗಳಿಂದ ತಯಾರಿಸುವ ಉತ್ಪನ್ನಗಳ ಉಪಯೋಗದ ಕುರಿತು ಮಾಹಿತಿ ನೀಡಿದರು.

ವಿರೂಪಾಕ್ಷಪ್ಪ ಜಕ್ಕನ್ನವರ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಪಾಟೀಲ, ಈಶ್ವರಪ್ಪ ಬೆಟಗೇರಿ, ಈರಣ್ಣ ಗಾಣಿಗೇರ, ರಾಮಣ್ಣ ಕನಾಜಿ, ರುದ್ರಗೌಡ ಮುಶಿನಗೌಡ್ರ, ಕಲ್ಲನಗೌಡ ಸಿದ್ದನಗೌಡ್ರ, ಯೋಜನೆಯ ಕೃಷಿ ಅಧಿಕಾರಿ ಶಂಕ್ರಯ್ಯ ಹಿರೇಮಠ, ಲಕ್ಷ್ಮೀ ಬೆಟಗೇರಿ, ವೀಣಾ ಪತ್ತಾರ ಹಾಗೂ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net