

ಸಿಂಧನೂರು: ನಗರದ ಹೊರವಲಯ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯರಸ್ತೆ ಪಕ್ಕದಲ್ಲಿರುವ ಕೃಷಿ ಭೂಮಿಯಲ್ಲಿ ಈ ಹಿಂದೆ ಉಳುಮೆ ಮಾಡಲಾಗುತ್ತಿತ್ತು. ಆದರೆ ಈಗ ನಿವೇಶಗಳಾಗಿ ಪರಿವರ್ತನೆಯಾಗುತ್ತಿದ್ದು, ಎಲ್ಲೆಡೆ ಲೇಔಟ್‌ಗಳ ಸದ್ದು ಹೆಚ್ಚಾಗಿದೆ.
ಇದನ್ನೂ ಓದಿ: ಮಾ.27ರಂದು ವಿಶ್ವ ರಂಗಭೂಮಿ ದಿನಾಚರಣೆ
ಬೆಂಗಳೂರು, ಹೈದರಾಬಾದ್ ಸೇರಿ ವಿವಿಧ ನಗರಗಳ ರಿಯಲ್ ಎಸ್ಟೇಟ್ ಉದ್ಯಮಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿ ಖರೀದಿಸಿ ಲೇಔಟ್‌ಗಳನ್ನು ನಿರ್ಮಿಸಿದ್ದಾರೆ. ನಗರದ ವಡೆಹಳ್ಳ, ಮಸ್ಕಿ ಮುಖ್ಯರಸ್ತೆ, ರಾಯಚೂರು ರಸ್ತೆ, ಕುಷ್ಟಗಿ, ಗಂಗಾವತಿ ಮುಖ್ಯ ರಸ್ತೆ, ಬಪ್ಪೂರ ರಸ್ತೆ,
ರೈಲ್ವೆ ನಿಲ್ದಾಣದ ರಸ್ತೆ ಮಾರ್ಗದ ಕೃಷಿ ಭೂಮಿಗಳಲ್ಲಿ ಲೇಔಟ್‌ಗಳು ತಲೆ ಎತ್ತಿದ್ದು, ಸುತ್ತಲೂ ತಡೆಗೋಡೆ ಹಾಕಿ, ರಸ್ತೆ, ಚರಂಡಿ, ಬೀದಿದೀಪಗಳು ಹಾಗೂ ನಿವೇಶನ ಸಂಖ್ಯೆಗಳನ್ನು ಅಳವಡಿಸಲಾಗಿದೆ. ಗ್ರಾಮೀಣ ಪ್ರದೇಶವು ಇದಕ್ಕೆ ಹೊರತಾಗಿಲ್ಲ.
ಹಸಿರುಮಯದಿಂದ ಕೂಡಿದ ಬೆಟ್ಟ ಗುಡ್ಡಗಳು, ಅರಣ್ಯ ಪ್ರದೇಶಗಳು ಒತ್ತುವರಿಗೆ ಸಿಲುಕಿವೆ. ಅರಣ್ಯ ಪ್ರದೇಶ ಕಡಿಮೆಯಾಗಿದೆ. ಇದರಿಂದ ಕೃಷಿ ಹಾಗೂ ಅರಣ್ಯಭೂಮಿ ಕಳೆದುಕೊಂಡು, ಆಹಾರ ಉತ್ಪಾದನೆಯಲ್ಲಿ ಭಾರಿ ಕುಂಠಿತ ಆಗುವ ಸಂಭವ ಹೆಚ್ಚಾಗಿದೆ. ಜನವಸತಿ ನಿವೇಶನ, ವಸತಿ ನಿರ್ಮಾಣಕ್ಕೆ ಪ್ರತಿಷ್ಠಿತ ಕಂಪನಿಗಳು ನಾಮಫಲಕ ಹಾಕಿರುವುದು ಕಂಡರೆ ಭೂಮಿಯೇ ಮಾಯವಾದಂತೆ ಕಾಣುತ್ತಿದೆ.
ರಿಯಲ್ ಎಸ್ಟೇಟ್ ದಂಧೆಕೋರರು, ಕಾರ್ಪೋರೇಟ್ ಕಂಪನಿಗಳವರು ಕೃಷಿಭೂಮಿ ಖರೀದಿಗೆ ಮುಂದಾಗಿದ್ದಾರೆ. ರೈತರು ಹಣದಾಸೆಗೆ ಕಡಿಮೆ ಬೆಲೆಗೆ ಕೃಷಿಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ನಗರದ 5 ಕಿಮೀ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳನ್ನು ಕಳೆದ ಮೂರ‌್ನಾಲ್ಕು ವರ್ಷಗಳ ಹಿಂದೆಯೇ ಸಿಂಧನೂರು, ಹೈದರಾಬಾದ್, ಬೆಂಗಳೂರು ಉದ್ಯಮಿಗಳು ಖರೀದಿ ಮಾಡಿ, ಈಗ ಕೋಟ್ಯಂತರ ರೂ. ಗಳಿಕೆಯಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ನಿರ್ಮಿಸುವ ಲೇಔಟ್‌ಗಳಿಗೂ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.ಅಕ್ರಮ ನಿವೇಶನಗಳಿಗೆ ಬೀಳಲಿ ಬ್ರೇಕ್ ಸಿಂಧನೂರಿನಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ನಗರದ ಹೃದಯ ಭಾಗದ ಜಾಗದ ಮೌಲ್ಯ ಐದಾರು ವರ್ಷದಲ್ಲಿ ಹತ್ತುಪಟ್ಟು ಹೆಚ್ಚಿದ್ದು, ಇನ್ನೂ ಐದಾರು ಕಿ.ಮೀ. ದೂರದಲ್ಲಿಯೂ ಎಕರೆ ಭೂಮಿ 2 ರಿಂದ 3ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದರಿಂದ ಕೃಷಿ ಮಾಡುವುದು ಬಿಟ್ಟು ಭೂಮಿ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ. ಉದ್ಯಮಿಗಳು ಆ ಬೆಲೆಗೆ ಭೂಮಿ ಖರೀದಿಸಿ ಲೇಔಟ್‌ಗಳನ್ನು ಮಾಡಿಕೊಂಡು ಐದಾರು ಕೋಟಿ ರೂ. ಲಾಭ ಗಳಿಸುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ.ಎಕರೆಗೆ 2-3 ಕೋಟಿ ರೂ.
ಪ್ರಭಾರ ಆಯುಕ್ತ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ , ಸಿಂಧನೂರು
ಮಂಜುನಾಥ ಗುಂಡೂರು
ಇನ್ಮುಂದೆ ನಗರ ವ್ಯಾಪ್ತಿಯಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡುವವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉದ್ಯಾನ ಸೇರಿ ಎಲ್ಲ ರೀತಿಯ ಸೌಲಭ್ಯ ಹೊಂದಿರಬೇಕು. ಜನರು ವಾಸ ಮಾಡಲು ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಎಲ್ಲಿಂದಲೋ ಬಂದು ಅರೆಬರೆ ಲೇಔಟ್ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ನಗರ ಸೌಂದರ್ಯಕ್ಕೂ ಒತ್ತು ನೀಡಲಾಗುವುದು.
ರೈತ
ಪರ್ವತರಡ್ಡಿ ಹತ್ತಿಗುಡ್ಡ
ಕಳೆದ ನಾಲ್ಕೈದು ವರ್ಷದಿಂದ ಕೃಷಿ ಭೂಮಿಗಳೆಲ್ಲ ಜನವಸತಿಯಾಗಿ ಪರಿವರ್ತನೆಯಾಗುತ್ತಿದ್ದು, ಇದಕ್ಕೆ ಭೂಮಿ ಬೆಲೆ ಏರಿಕೆಯಾಗಿರುವುದೇ ಕಾರಣವಾಗಿದೆ. ಸಿಂಧನೂರಿನ ಭೂಮಿ ಬೆಲೆ ದೊಡ್ಡ ನಗರಗಳನ್ನು ಮೀರಿಸಿದೆ. ಉದ್ಯಮಿಗಳು ಕಡಿಮೆ ಬೆಲೆಗೆ ಭೂಮಿ ಖರೀದಿಸಿ, ಲೇಔಟ್ ಮಾಡಿ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ.