ಸಾಗುವಳಿ ರೈತರ ಒಕ್ಕಲೆಬ್ಬಿಸದಂತೆ ಹೂವಿನಹಡಗಲಿಯಲ್ಲಿ ಕನ್ನಡ ಸೇನೆ ಪ್ರತಿಭಟನೆ

090320 Hadagali Kannada Sene Protest
Published on

ಹೂವಿನಹಡಗಲಿ: ಸಾಗುವಳಿ ರೈತರ ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಕನ್ನಡ ಸೇನೆಯ ತಾಲೂಕು ಘಟಕ ಸೋಮವಾರ ಪ್ರತಿಭಟನೆ ನಡೆಸಿತು. ಸಂಘದ ತಾಲೂಕು ಅಧ್ಯಕ್ಷ ಕಲಿಕೇರಿ ಬಸವರಾಜ ಮಾತನಾಡಿ, 63 ತಿಮ್ಮಲಾಪುರ , ನವಲಿ ಕಂದಾಯ ಭಾಗಗಳಲ್ಲಿ ಹೊನ್ನೂರು, ರಾಜವಾಳ ಗ್ರಾಮಗಳ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಕಂದಾಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಮಾಜಿ ಸೈನಿಕರ ಹೆಸರಿನಲ್ಲಿ ಭೂಮಿ ಕೊಡಬೇಕೆಂದು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ತಹಸೀಲ್ದಾರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಾಗುವಳಿದಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್ ವಿಜಯಕುಮಾರ್‌ಗೆ ಮನವಿ ಸಲ್ಲಿಸಿದರು. ಸಂಘದ ಮುಖಂಡರಾದ ಶಿವಪುತ್ರಪ್ಪ, ಗುಡದಪ್ಪ, ಯಲ್ಲಮ್ಮ, ಜಾನಮ್ಮ, ಪರಸಪ್ಪ, ದುರುಗಮ್ಮ, ಎಫ್.ಐ. ಹಲವಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net