ಸ್ವಾಭಿಮಾನದಿಂದ ಕೃಷಿ ಮಾಡಿ

kls swa
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಫಿ ಸಂಸ್ಕರಣಾ ಘಟಕ ಹಾಗೂ ಗೋದಾಮುಗಳನ್ನು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಜಿ.ಭೀಮೇಶ್ವರ ಜೋಷಿ, ಜಿ.ಕೆ.ಮಂಜಪ್ಪಯ್ಯ, ಬಿ.ಶಿವಣ್ಣ, ಆಶಾಲತಾ ಜೈನ್ ಇತರರಿದ್ದರು.
Published on

ಕಳಸ: ಸತ್ಯ ದರ್ಶನ ಮಾಡುತ್ತಿದ್ದ ಋಷಿಗಳು ಕೂಡ ಪ್ರಕೃತಿ ಉಪಾಸನೆ ಅಡಿಯಲ್ಲಿ ಕೃಷಿ ಮಾಡುತ್ತಿದ್ದರು. ಕೃಷಿಯನ್ನು ಸ್ವಾಭಿಮಾನದಿಂದ ಮಾಡಿದಾಗ ಮಾತ್ರ ಆ ಕ್ಷೇತ್ರ ಉಳಿವು ಸಾಧ್ಯ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಗುರುವಾರ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಫಿ ಸಂಸ್ಕರಣಾ ಘಟಕ ಹಾಗೂ ಗೋದಾಮು ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ದೇಶದಲ್ಲಿ ಪ್ರಾಕೃತಿಕ ಸಂಪನ್ಮೂಲ ತುಂಬ ಚೆನ್ನಾಗಿದೆ. ಕೃಷಿಗೆ ಯೋಗ್ಯ ಭೂಮಿ ಇದೆ. ಅನಾಧಿ ಕಾಲದಿಂದ ಭೂಮಿಯನ್ನು ಪೂಜಿಸಿ ಕೃಷಿಯನ್ನು ಕರ್ಮ ಯೋಗವನ್ನಾಗಿ ಮಾಡಿಕೊಂಡು ಬರುತ್ತಿದ್ದರು ಎಂದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಬಿಟ್ಟು ಬೇರೆ ವೃತ್ತಿ ಅನುಸರಿಸುತ್ತಿದ್ದಾರೆ. ವೃತ್ತಿ ಮೇಲೆ ವಿಶ್ವಾಸ ಇಲ್ಲದಿದ್ದಾಗ ಅನಿವಾರ್ಯವಾಗಿ ಆ ವೃತ್ತಿ ಬಿಡಬೇಕಾಗುತ್ತೆ. ಕೃಷಿ ಮೇಲೆ ವಿಶ್ವಾಸ ಇಲ್ಲದೆ ಇರುವುದರಿಂದ ಕೃಷಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುಂತಾಗಿದೆ. ಕೃಷಿಯ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಸ್ವಾಭಿಮಾನದಿಂದ ವೃತ್ತಿ ಮಾಡಬೇಕು. ನಾನೊಬ್ಬ ರೈತ ನಾನು ದೇಶಕ್ಕೆ ಅನ್ನ ನೀಡುವವನು ಎಂದು ಎದೆತಟ್ಟಿ ಹೇಳಬೇಕು ಎಂದು ತಿಳಿಸಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, 58 ವರ್ಷಗಳ ಇತಿಹಾಸ ಈ ಸಂಘದ ಹೆಗ್ಗಳಿಕೆ. ಸಂಸ್ಥೆ ಶ್ರಮಕ್ಕೆ ತಕ್ಕ ಲ ಪಡೆದು ಸದಸ್ಯರಿಗೂ ಕೊಟ್ಟು ರೈತರ ಪರಿಪೂರ್ಣ ಹಿತ ಕಾಪಾಡಿದೆ. ಸೇವಾ ಭಾವನೆಯೊಂದಿಗೆ ರೈತರಿಗೆ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿಡುವ ಪ್ರಯತ್ನ ಮಾಡಿದೆ. ಅಡಕೆ, ಕಾಫಿ, ಕಾಳುಮೆಣಸು ಬೆಳೆಗಾರರಿಗೆ ಸಂಸ್ಕರಣದ ಜತೆ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಟ್ಟಿದೆ ಎಂದು ಹೇಳಿದರು.
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, 17 ಕೋಟಿ ರೂ. ವೆಚ್ಚದಲ್ಲಿ ಕಾಫಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಘಟಕದಿಂದ ಕಾಫಿ ಮಾರುಕಟ್ಟೆ ನಡೆಸಲು ಕ್ಯಾಂಪ್ಕೋಗೆ ಮನವಿ ಮಾಡಿದ್ದೇವೆ. ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದರಿಂದ ಸಂಸ್ಥೆ ಬೆಳೆದಿದೆ ಎಂದು ಶ್ಲಾಘಿಸಿದರು.
ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್‌ಕುಮಾರ್ ಕೊಡ್ಗಿ, ಮೂಡಿಗೆರೆ ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಶಿವಣ್ಣ, ಮೂಡಿಗೆರೆ ಟಿಎಪಿಸಿಎಂಎಸ್ ಅಧ್ಯಕ್ಷ ವಿ.ಕೆ.ಶಿವೇಗೌಡ, ಕಳಸ ಕೆಸಿಎ ಬ್ಯಾಂಕ್ ಉಪಾಧ್ಯಕ್ಷ ಆಶಾಲತಾ ಜೈನ್, ನಿರ್ದೇಶಕರಾದ ಎ.ಆರ್.ಸತೀಶ್ಚಂದ್ರ, ಎಚ್.ಎಸ್.ಶ್ರೀಪಾಲಯ್ಯ, ಕೆ.ಆರ್.ರವಿಕುಮಾರ್, ಅನಿಲ್ ಗ್ಯಾವಿನ್ ಡಿಸೋಜ, ಕೆ.ರಾಜೇಂದ್ರ, ಆರ್.ಶಕುಂತಲಾ, ಎಚ್.ಟಿ.ಕೃಷ, ಕೆ.ಎಸ್.ಕೃಷ್ಣಪ್ಪ, ಎನ್.ಅನಸೂಯಾ, ಸಿಇಒ ಪಿ.ಮಹಬಲೇಶ್ವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net