ಸನಾತನ ಜ್ಞಾನಶಕ್ತಿ ಬೆಳೆಸಿಕೊಳ್ಳಿ; ಡಾ.ನಿರ್ಮಲಾನಂದನಾಥ ಸ್ವಾಮೀಜಿ

29 kunigal 1 (1)
Published on

ಕುಣಿಗಲ್: ಆಧುನಿಕ ಜಗತ್ತಿನಲ್ಲಿ ಸದಾ ಓಡುತ್ತಿರುವ ಮನುಷ್ಯನಿಗೆ ಹೊರಗಿನ ಜಗತ್ತು ಎಷ್ಟು ಮುಖ್ಯವೋ ಆಂತರಿಕ ಜಗತ್ತು ಅಷ್ಟೇ ಮುಖ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬೆಸ್ಕಾಂ ಕಚೇರಿ ಅವರಣದಲ್ಲಿ ಭಾನುವಾರ ಮಹಾಗಣಪತಿ ಮೂರ್ತಿ ಹಾಗೂ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆಧುನಿಕ ವಿಜ್ಞಾದ ಬೆಳಕು ಸನಾತನ ಧರ್ಮದ ಆತ್ಮದ ಬೆಳಕು, ಈ ಎರಡು ಮಿಲನಗೊಳಿಸುವಂತ ಕಾರ್ಯಕ್ರಮ ಇದ್ದಾಗಿದೆ, ವಿಜ್ಞಾನ ಬೆಳೆದ ಹಾಗೆ ಜ್ಞಾನ ಮುಳುಗುತ್ತಿದೆ ಎಂಬುದು ತಪ್ಪು, ವಿಜ್ಞಾನ ನಮಗೆ ಏನೆಲ್ಲಾ ಕೊಟ್ಟಿದೆ, ಎರಡುವರೆ ದಶಕಗಳಿಂದ ಎಷ್ಟೇಲ್ಲಾ ಬದಲಾಗಿದೆ ಎಂದರು.

ಮರ ಎತ್ತರಕ್ಕೆ ಸದೃಢವಾಗಿ ಬೆಳೆಯಲು ಮಣ್ಣಿನ ಆಳದಲ್ಲಿ ಬೇರುಗಳು ಅಷ್ಟೇ ಶಕ್ತಿಶಾಲಿಯಾಗಿ ಎಲ್ಲ ಕಡೆ ಅಗಲವಾಗಿ ಆಳಕ್ಕೂ ಹೋಗಬೇಕು, ಅದೇ ರೀತಿ ಆಧುನಿಕ ಜಗತ್ತಿನ ಎಲ್ಲ ಅವಿಷ್ಕಾರಗಳ ತತ್ತಫಲವನ್ನು ಅನುಭವಿಸುವ ಜತೆಯಲ್ಲಿ ನಮ್ಮ ಸನಾತನ ಕಾಲದ ಜ್ಞಾನ ಶಕ್ತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಮಾನವನ ಬದುಕು ಸಾರ್ಥಕವಾಗಲು ಜ್ಞಾನ, ಆತ್ಮಶಕ್ತಿ, ಭೂಮಿ, ನೀರು, ಉತ್ತಮ ಪರಿಸರ, ಆರೋಗ್ಯ, ಶಿಕ್ಷಣ ಪ್ರಮುಖವಾಗಿದೆ ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕೆ ಮರಗಿಡ ಕಡಿದು ಹಾಳು ವಾಡುವುದಲ್ಲದೆ, ಭೂಮಿಯನ್ನು ನಾಶ ಪಡಿಸುವಂತ ಹೀನ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಬೇಸರಿಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಾತನಾಡಿ, ಇಲಾಖೆಯಲ್ಲಿ ಲೈನ್‌ಮೆನ್ ಸೇರಿ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಬೆಸ್ಕಾಂ ಉತ್ತಮವಾಗಿ ನಡೆಯುತ್ತಿದೆ, ಕರ್ತವ್ಯದ ಜತೆಗೆ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಗಣಪತಿ ದೇವಾಲಯ ನಿರ್ಮಿಸಿರುವುದು ಮಾದರಿ ಕಾರ್ಯ ಎಂದರು. ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಆದಿನಾರಾಯಣ್, ಚಂದ್ರಶೇಖರ್, ಅಧೀಕ್ಷಕ ಇಂಜಿನಿಯರ್ ಗೋವಿಂದಪ್ಪ, ಅಲ್ಲಾಬಕಾಶ್, ಇಇ ಪುರುಷೋತ್ತಮ್, ಎಇಇ ವೀರಭದ್ರಚಾರ, ಗಿರೀಶ್, ಬೆಸ್ಕಾಂ ನೌಕರರ ಸಂದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ಶ್ರೀನಿವಾಸ್‌ಗೌಡ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net