ಯಕ್ಷಗಾನ ಕಲೆ ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿ

ಕೊಪ್ಪಳದಲ್ಲಿ ಜನರ ಗಮನ ಸೆಳೆದ ಯಕ್ಷಗಾನ ಕಲೆ ಪ್ರದರ್ಶನ.
ಕೊಪ್ಪಳದಲ್ಲಿ ಜನರ ಗಮನ ಸೆಳೆದ ಯಕ್ಷಗಾನ ಕಲೆ ಪ್ರದರ್ಶನ.
Published on

ಕೊಪ್ಪಳ: ಯಕ್ಷಗಾನ ಪ್ರಾಚೀನ ಕಲೆಯಾಗಿದ್ದು, ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು ಎಂದು ವಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಸಿರಿ ಸಿಂಗಾರಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ವಾತನಾಡಿದರು. ಕನ್ನಡ ನಾಡು, ನುಡಿ, ಸಂಸ್ಕೃತಿಯಲ್ಲಿ ಯಕ್ಷಗಾನ ಕಲೆಯೂ ಪ್ರಮುಖವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಯಕ್ಷಗಾನವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ತಿಳಿಸಿದರು.

ಶಾಸಕ ರಾವೇಂದ್ರ ಹಿಟ್ನಾಳ ವಾತನಾಡಿ, ಯಕ್ಷಗಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದು, ಕಲೆಗೆ ಬೆಲೆ ಕಟ್ಟಲಾಗದು. ಕರಾವಳಿ ಭಾಗದ ಕಲೆಯನ್ನು ಕೊಪ್ಪಳದಲ್ಲಿ ಪ್ರದರ್ಶಿಸಿ ಪರಿಚಯಿಸುತ್ತಿರುವುದು ಶ್ಲಾಘನೀಯ. ಪ್ರಾಚೀನ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸವಾಗಲಿ ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ, ಕರಾವಳಿ ಬಳಗದ ಗೌರವ ಅಧ್ಯಕ್ಷ ಜೀವನ ಶೆಟ್ಟಿ, ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಸಂಚಾಲಕ ರಂಜಿತ ಶೆಟ್ಟಿ ವಕ್ವಾಡಿ, ನಟಿಯರಾದ ಶೀತಲ್ ಶೆಟ್ಟಿ, ಜಿ.ಎಸ್.ನಾಗಶ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net