ಯಕ್ಷಗಾನ ಕಲೆ ಬೆಳೆಸಿ

bhr yaksha
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಉತ್ಸವದಲ್ಲಿ ಖ್ಯಾತ ಭಾಗವತ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ತುಳು ಹಾಸ್ಯ ಕಲಾವಿದರಿಂದ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ನಡೆಯಿತು.
Published on

ಬಾಳೆಹೊನ್ನೂರು: ರಾಜ್ಯದ ವಿಶೇಷ ಕಲೆಯಾದ ಯಕ್ಷಗಾನಕ್ಕೆ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ ಎಂದು ದುರ್ಗಾದೇವಿ ನವರಾತ್ರಿ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಹೇಳಿದರು.

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಶುಕ್ರವಾರ ಆಯೋಜಿಸಿದ್ದ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ದೇಶದ ಸಂಸ್ಕೃತಿಯಲ್ಲಿ ಯಕ್ಷಗಾನ ಕಲೆ ವಿಶಿಷ್ಟವಾಗಿದ್ದು, ಇದರಲ್ಲಿ ಭಕ್ತಿ ಭಾವ, ಹಾಸ್ಯ ಸೇರಿದಂತೆ ಹಲವು ಪ್ರಾಕಾರಗಳನ್ನು ಹೊಂದಿ ನೋಡುಗರನ್ನು ಹಿಡಿದಿಟ್ಟುಕೊಂಡಿದೆ. ಯಕ್ಷಗಾನದಲ್ಲಿ ಪ್ರಮುಖವಾಗಿ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳು ನೋಡುಗರ ಗಮನಸೆಳೆಯುತ್ತವೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಯಕ್ಷಗಾನ ಮನೆ ಮಾತಾಗಿದ್ದು, ಇದರ ನೋಡುಗರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಈ ಕಲೆಯನ್ನು ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂದರು.
ಖ್ಯಾತ ಭಾಗವತ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ತುಳು ಹಾಸ್ಯ ಕಲಾವಿದರಿಂದ ವಿವಿಧ ಯಕ್ಷ ಹಾಸ್ಯ ಕಾರ್ಯಕ್ರಮ ನಡೆಯಿತು.
ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಚೈತನ್ಯ ವೆಂಕಿ, ದೇವದಾಸ್, ಮನುಕುಮಾರ್, ದಿನೇಶ್ ತುಪ್ಪೂರು, ಎಂ.ನಾರಾಯಣ, ಗಿರೀಶ್ ಎಂಟಿಆರ್, ಬಿ.ಜಗದೀಶ್ಚಂದ್ರ, ಎ.ಸಿ.ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net