

ವಿಜಯಪುರ: ಪುಸ್ತಕ ಓದುವುದರಿಂದ ಎಷ್ಟು ಜ್ಞಾನ ಸಂಪಾದಿಸಲು ಸಾಧ್ಯವೋ, ಅಷ್ಟೇ ಜ್ಞಾನ ಪ್ರವಾಸ ಮಾಡುವುದರಿಂದಲೂ ಸಂಪಾದನೆ ಮಾಡಬಹುದಾಗಿದೆ ಎಂದು ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಹೇಳಿದರು.
ನಗರದ ಶಿವಚಿದಂಬರೇಶ್ವರ ಸಾಂಸತಿಕ ಭವನದಲ್ಲಿ ಇತ್ತೀಚೆಗೆ ಮಹಾಂತೇಶ ಯರಂತೆಲಿಮಠ ಅವರ ಕೃತಿ ಚಾರಧಾಮ ಯಾತ್ರಾ&ಪ್ರವಾಸ ಕಥನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಚಾರಧಾಮ, ವೈಷ್ಣೋದೇವಿ, ಸೋಮನಾಥದಂಥ ಜ್ಯೋರ್ತಿಲಿಂಗಗಳ ದರ್ಶನಕ್ಕಾಗಿ ಯಾತ್ರೆ ಮಾಡುವುದರಿಂದ ಅಧ್ಯಾತ್ಮದತ್ತ ಒಲವು ಗಳಿಸಬಹುದು ಎಂದರು.
ನಿವೃತ ಶಿಕ್ಷಕ ಸಿ.ಎಸ್. ಕಣಕಾಲಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಮತ್ತು ವಾಣಿಶ್ರೀ ಪ್ರಾರ್ಥಿಸಿದರು. ಲೇಖಕ ಮಹಾಂತೇಶ ಯರಂತೆಲಿಮಠ ಸ್ವಾಗತಿಸಿದರು. ಸಾಹಿತಿ ಮಹಾದೇವ ರಬಿನಾಳ ಪುಸ್ತಕ ಪರಿಚಯಿಸಿದರು. ಚಂದ್ರಶೇಖರ ಗಂಟೆಪ್ಪಗೋಳ ನಿರೂಪಿಸಿದರು. ಅಕ್ಕಮಹಾದೇವಿ ಪಾಟೀಲ ಲೇಖಕರಿಗೆ ಸನ್ಮಾನಿಸಿ, ಪ್ರವಾಸದ ಮಹತ್ವ ತಿಳಿಸಿದರು. ಉಮಾ ವಂದಿಸಿದರು.