ದೇಶ ಪ್ರೇಮ, ಸದ್ಭಾವನೆ ಬೆಳೆಸಿಕೊಳ್ಳಿ

20 kdr 3
ಕಡೂರಿನ ಗಿರಿಯಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಶೈಕ್ಷಣಿಕ ನೆರವು ನೀಡಲಾಯಿತು.
Published on

ಕಡೂರು: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಗುರಿ ತಲುಪಲು ಅಧ್ಯಯನಶೀಲರಾಗಬೇಕು ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ಹೇಳಿದರು.
ಗಿರಿಯಾಪುರದ ಶ್ರೀ ಗುರುಕೃಪಾ ಪ್ರೌಢಶಾಲಾ ಆವರಣದಲ್ಲಿ ನಡೆದ ಡಾ.ಜಿ.ಎಂ.ನಿಜಗುಣ ಅವರ 6ನೇ ವರ್ಷದ ಪುಣ್ಯಸ್ಮರಣೆ, ಶಾಲಾ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪತ್ತಿನ ಜತೆಗೆ ಜೀವನದಲ್ಲಿ ಉತ್ತಮ ಗುರಿ ಹೊಂದಬೇಕು. ದೇಶ ಪ್ರೇಮ, ಸದ್ಭಾವನೆ ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗುರುಕೃಪಾ ಶಾಲೆ ಆಡಳಿತ ಮಂಡಳಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ದಿ. ಡಾ.ಜಿ.ಎಂ.ನಿಜಗುಣ ಅವರ ಸ್ಮರಣಾರ್ಥ ಪ್ರತಿ ವರ್ಷ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10,000 ರೂ. ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಯಿತು. ಗುರುಕೃಪಾ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜಿ.ಸಿ ಜಯಸೋಮನಾಥ, ಆರೋಗ್ಯ ಇಲಾ ನಿವೃತ್ತ ನಿರ್ದೇಶಕ ಡಾ.ಜಿ.ಎಂ. ವಾಮದೇವ, ಪ್ರೋ.ಪಿ.ದೇವರಾಜು, ಬಿ.ಸಿ .ಮಮತಾ, ಪ್ರೋ ಕೆ.ಎಸ್.ನಟರಾಜ್, ಜಿ.ಎಂ ನೀಲಲೋಚನ ಸ್ವಾಮಿ ಮುಖ್ಯಶಿಕ್ಷಕ ಎಂ.ಧರಣೇಂದ್ರ ಮೂರ್ತಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net