

ಸಂಡೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮರಗಿಡಗಳನ್ನು ಹೆಚ್ಚಾಗಿ ಬೆಳೆಸಿದರೆ ಸಕಾಲದಲ್ಲಿ ಮಳೆ-ಬೆಳೆ ಬರುತ್ತದೆ ಎಂದು ಬಿಇಒ ಡಾ.ಐ.ಆರ್.ಅಕ್ಕಿ ಹೇಳಿದರು.
ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಂಎಸ್‌ಪಿಎಲ್ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರ-ಗಿಡಗಳನ್ನು ಸಂರಕ್ಷಣೆ ಮಾಡದಿದ್ದರೆ ಅತಿವೃಷ್ಟಿ ಮತ್ತು ಆನಾವೃಷ್ಟಿಗಳು ಜಾಸ್ತಿಯಾಗುತ್ತವೆ. ಪ್ರತಿ ವಿದ್ಯಾರ್ಥಿ ಗಿಡಗಳನ್ನು ಬೆಳೆಸಬೇಕು ಮತ್ತು ಸಂರಕ್ಷಿಸಬೇಕು ಎಂದರು.
ಎಂಎಸ್‌ಪಿಎಲ್ ಹಿರಿಯ ಪರಿಸರ ಅಧಿಕಾರಿ ಮುರಳೀಧರ ಮಾತನಾಡಿ, ಪ್ರಕೃತಿ ಮತ್ತು ಮಾನವ ವಿರೋಧಿಯಾದ ಪ್ಲಾಸ್ಟಿಕ್ ಬಳಕೆ ಮೊದಲು ನಿಷೇಧಿಸಬೇಕು. ಪ್ರತಿಯೊಬ್ಬರೂ ಬಟ್ಟೆ ಚೀಲಗಳನ್ನು ಬಳಕೆ ಮಾಡಬೇಕು ಎಂದರು.
ಎಂಎಸ್‌ಪಿಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೇದಾ ವೆಂಕಟಯ್ಯ ಮಾತನಾಡಿದರು. ಎಂಎಸ್‌ಪಿಎಲ್‌ನ ಪರಿಸರ ಅಧಿಕಾರಿ ಶಾಣಯ್ಯ, ಸಿಇಒ ಕೆ.ಮಧುಸೂದನ, ಪ್ರಭುದೇವಪ್ಪ, ಸಿಎಸ್‌ಆರ್‌ನ ಎಚ್.ಕೆ.ರಮೇಶ್, ವೆಂಕಟಾಚಾರ್, ವೆಂಕಟರಮಣರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ, ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ್ ಇದ್ದರು.