

ಮುಧೋಳ : ಭವಿಷ್ಯದ ಶಿಕ್ಷಕರು ಗುರಿ, ಸಾಧನೆಯೆಡೆಗೆ ಸಾಗಬೇಕಾದರೆ ಬೋಧನೆಯ ವಿಷಯವನ್ನು ಪ್ರೀತಿಸುವ ಜೊತೆಗೆ ವತ್ತಿಯನ್ನು ಗೌರವಿಸುವ ತಮ್ಮ ವತ್ತಿಯ ಬಗ್ಗೆ ಹೆಮ್ಮೆ ಪಡುವ ಗುಣವನ್ನು ಪಡೆದುಕೊಳ್ಳಿ ಎಂದು ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಹೇಳಿದರು.
ಶನಿವಾರ ನಗರದ ಎಸ್.ಕೆ.ಟಿ.ಎಸ್ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸದಾಶಿವ ಶಿಕ್ಷಣ ಮಹಾವಿದ್ಯಾಲಯ ಅಂತಿಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳ ದೀಪದಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಬುದ್ದಿವಂತಿಕೆ ಹಾಗೂ ಕೌಶಲವನ್ನು ಹೆಚ್ಚಿಸಿ ಜೀವನದ ಹಾದಿಯಲ್ಲಿ ಸಾಗಬೇಕು. ಇದರೊಂದಿಗೆ ಪೋಷಕರು ಹಾಗೂ ಗುರು ಹಿರಿಯರಿಗೆ ಗೌರವವನ್ನು ನೀಡಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಸ್.ಸವನೂರ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಶಾಲೆಯ ದೀಪವಿದ್ದಂತೆ. ಅವರು ಜಗತ್ತನ್ನು ಬೆಳಗುವ ನಂದಾದೀಪಗಳಾಗಬೇಕು, ಒಳ್ಳೆಯ ಆಲೋಚನೆ ಒಳ್ಳೆಯ ಹದಯವನ್ನು ಗಳಿಸುತ್ತದೆ. ಸಂಬಂಧವನ್ನು ಉಳಿಸಿ, ಬೆಳೆಸಬೇಕು. ಶಿಕ್ಷಕರಲ್ಲಿ ಸಮಾಜವನ್ನು ಕಟ್ಟುವ ಸಾಮರ್ಥ್ಯವಿದೆ. ಕನ್ನಡ ನಾಡು ಇಡಿ ಇತಿಹಾಸ, ಬದುಕಿನ ಸುಂದರ ಚಿತ್ರಣಗಳನ್ನು ಕಟ್ಟಿಕೊಡುತ್ತದೆ ಹೀಗಾಗಿ ವಿದ್ಯಾರ್ಥಿಗಳು ಜಗತ್ತನ್ನು ಬೆಳಗುವ ನಂದಾದೀಪಗಳಾಗಲಿ ಎಂದರು.
ಕಾಂಗ್ರೆಸ್ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ ಮಾತನಾಡಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೋಷಕರ ಹಾಗೂ ಪ್ರಾಧ್ಯಾಪಕರ ಸಹಕಾರ ಸದಾ ಇರುತ್ತದೆ. ಹಾಗಾಗಿ ಇವರಿಗೆ ಋಣಿಯಾಗಿರುವುದು ಎಲ್ಲರ ಕರ್ತವ್ಯ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹರ್ಷ ವ್ಯಕ್ತಪಡಿಸಿದರು.
ಕು.ಸಿದ್ದು ತುಂಗಳ, ಜ್ಯೋತಿ ಹಿರೇಮಠ, ಕಾಂಗ್ರೆಸ್ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ ಮಾತನಾಡಿದರು ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಿರಿಯರಾದ ಶಂಕರ ತಿಮ್ಮಾಪೂರ, ಕು.ವಿಜಯಲಕ್ಷೀತ್ಮ ತಳೇವಾಡ, ಆಸ್ಮಾ ಗಣಿ, ವಾಣಿಶ್ರೀ ಗೌಡರ, ಅಶ್ವಿನಿ ಬಿರಾದಾರ, ದುರಗಪ್ಪ ಕಾಳಮ್ಮನವರ ಇದ್ದರು.
ಪ್ರಾಚಾರ್ಯ ಡಾ.ವೈ.ಎಸ್.ಸವನೂರ ದೀಪದಾನ ಸಮಾರಂಭದ ಅಧ್ಯಕ್ಷತೆ ವಹಿಸಿದರು.ನಂತರ ಕಿರಿಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಶುಭ ಹಾರೈಸಿದರು. ಕಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.