

ವಿಜಯಪುರ: ವಿದ್ಯಾರ್ಥಿಗಳು ಶಿಣಕ್ಕೆ ಆದ್ಯತೆ ನೀಡುವ ಮೂಲಕ ಜೀವನದಲ್ಲಿ ರ್ನಿದಿಷ್ಟ ಗುರಿ ಹೊಂದಬೇಕು. ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಶಿಸ್ತಿನ ಗುಣಗಳನ್ನು ರೂಢಿಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ರವಿ ಹತ್ತಳ್ಳಿ ಹೇಳಿದರು.
ನಗರದ ಷಣ್ಮುಖಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನವಶ್ರೀ ಬೇಸಿಗೆ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯಪ್ರೆ ಬಹಳ ಮುಖ್ಯ. ನಿರಂತರ ಅಧ್ಯಯನದಿಂದಲೇ ಗುರಿ ತಲುಪಲು ಸಾಧ್ಯ ಎಂಬುವುದನ್ನು ಅರಿತುಕೊಳ್ಳಬೇಕು. ಯಾವುದೇ ಗುರಿ ತಲುಪಬೇಕಾದರೂ ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ ಎಂದರು.
ಶಿಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಸದೃಢ ಸಮಾಜ ನಿರ್ಮಾಣದಲ್ಲಿ ಶಿಣದ ಪಾತ್ರ ಬಹು ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯ ಅಶೋಕ ಬಿರಾದಾರ ಮಾತನಾಡಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಲ್ಲನಗೌಡ ಬಿರಾದಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಿವಾನಂದ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಬಿ.ಎನ್. ಗಸ್ತಿ, ರಮೇಶ ವಿಶ್ವಕರ್ಮ, ಶರತ, ಸಿದ್ದನಗೌಡ ಬಿರಾದಾರ, ಜಕರಾಯ ಪೂಜಾರಿ, ಮಹಾದೇವ, ಸಂತೋಷ ಇಂಗಳಗಿ, ಬಿ.ಎಸ್. ವಾಡೇದ, ಎಚ್.ಸಿ. ಪಾಟೀಲ, ಎಸ್.ಕೆ. ಉಪ್ಪಾರ, ಎಸ್.ಬಿ. ಗುಲಗಂಜಿ, ರೂಪಾ ಬಿರಾದಾರ, ಗೌಡಪ್ಪ ಬಿರಾದಾರ, ಈಶ್ವರ ಹಡಗಿನಾಳ ಮತ್ತಿತರರಿದ್ದರು.